ಡಬ್ಲುಡಬ್ಲುಇ ಚಾಂಪಿಯನ್ ದಿ ಗ್ರೇಟ್ ಖಲಿ ಅವರಿಂದ ಸ್ಥಾಪಿಸಲ್ಪಟ್ಟ ತರಬೇತಿ ಶಾಲೆ ಕಾಂಟಿನೆಂಟೆಲ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಆಶ್ರಯದಲ್ಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಅದರಲ್ಲಿ ಭಾಗವಹಿಸಿದ್ದ ವೃತ್ತಿಪರ ಮಹಿಳಾ ಕುಸ್ತಿಪಟು ಬಿಬಿ ಬುಲ್‌ಬುಲ್ ತನ್ನನ್ನು ಸೋಲಿಸುವವರು ಯಾರು ಇಲ್ಲ ಎಂಬ ಅಹಂಕಾರದಲ್ಲಿ ನೆರೆದ ಪ್ರೇಕ್ಷಕರಿಗೆ ತನ್ನ ಜತೆ ಕಾದಾಡುವಂತೆ ಬಹಿರಂಗ ಸವಾಲನ್ನು ಹಾಕಿದ್ದಾಳೆ. ಕೆಲ ಕ್ಷಣ ಯಾರೂ ಮುಂದೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಹಳದಿ ಬಣ್ಣದ ಸೆಲ್ವಾರ್ ತೊಟ್ಟಿದ್ದ ಮಹಿಳೆಯೋರ್ವರು ಮುಂದೆ ಬಂದರು. ಒಂದು ಕ್ಷಣ ದಂಗು ಬಡಿದ ಜನ ಅವರ ಕದನವನ್ನು ನೋಡಲು ತುಗಿದಾಲಲ್ಲಿ ನಿಂತರು. ಆದರೆ ದೈತ್ಯ ಗಾತ್ರದ ಬಿಬಿ ಬುಲ್‌ಬುಲ್ ಮುಂದೆ ಸಾಧಾರಣ ಮೈಕಟ್ಟಿನ ಯುವತಿ ಯಾವ ಲೆಕ್ಕ ಎಂದೇ ಎಲ್ಲರೂ ಭಾವಿಸಿದ್ದರು.