ಪ್ಯಾರಾಲಿಂಪಿಕ್ಸ್: ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್ ಕುಮಾರ್
ಭಾನುವಾರ, 29 ಆಗಸ್ಟ್ 2021 (21:01 IST)
ಟೋಕಿಯೋ: ಭಾರತದ ಪಾಲಿಗೆ ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಶುಭ ದಿನವಾಗಿ ಪರಿಣಮಿಸಿದೆ. ಹೈಜಂಪ್ ನಲ್ಲಿ ನಿಶಾದ್ ಬೆಳ್ಳಿ ಗೆದ್ದ ಬೆನ್ನಲ್ಲೇ ಇದೀಗ ಡಿಸ್ಕಸ್ ಥ್ರೋನಲ್ಲಿ ವಿನೋದ್ ಕುಮಾರ್ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
Photo Courtesy: Google
ಇದರೊಂದಿಗೆ ಇಂದು ಒಂದೇ ದಿನ ಭಾರತದ ಪಾಲಿಗೆ ಎರಡು ಪದಕ ಒಲಿದುಬಂದಿದೆ. ಒಲಿಂಪಿಕ್ ಕೂಟದಲ್ಲಿ ಅಥ್ಲೆಟಿಕ್ ವಿಭಾಗದಲ್ಲೂ ಭಾರತ ಈ ಸಾಧನೆ ಮಾಡುತ್ತಿರುವುದು ವಿಶೇಷವಾಗಿದೆ.
ನಿಶಾದ್ ಮತ್ತು ವಿನೋದ್ ಕುಮಾರ್ ಸಾಧನೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.