ರಿಯೋ ಓಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಈ ವರ್ಷವೇ ತಾವು ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಆದರೆ ತಮ್ಮ ಸಾಧನೆಗೆ ಸದಾ ಪ್ರೇರಣೆಯಾಗಿ ನಿಂತ ಭಾವಿ ಪತಿಯ ಹೆಸರನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ಸತ್ಯವನ್ನವರು ಬಾಯ್ಬಿಟ್ಟಿದ್ದಾರೆ. ತಮ್ಮ ಮನದನ್ನ ಸಹ ಕುಸ್ತಿ ಪಟುವಾಗಿದ್ದು, ಕಳೆದ ಬಾರಿಯ ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಸತ್ಯವ್ರತ್ ಎಂದು ಹೇಳುವುದರ ಮೂಲಕ ಎಲ್ಲ ಕುತೂಹಲಗಳಿಗೆ ಅವರು ತೆರೆ ಎಳೆದಿದ್ದಾರೆ.