ತಮ್ಮ ಪತ್ನಿಯನ್ನು ಕಾರು ಅಪಘಾತದಲ್ಲಿ ಕಳೆದುಕೊಂಡ ಮೇಲೆ ಆಸ್ಟ್ರಿಯನ್ -ಜರ್ಮನ್ ವೇಟ್‌ಲಿಫ್ಟರ್ ಸ್ಟೈನರ್ ತರಬೇತಿಯನ್ನೇ ಬಿಡಬೇಕೆಂದು ಎಣಿಸಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಾಗ್ದಾನವನ್ನು ಪತ್ನಿಗೆ ನೀಡಿದ್ದನ್ನು ನೆನಪಿಸಿಕೊಂಡು ತರಬೇತಿಯನ್ನು ಮುಂದುವರಿಸುತ್ತಾರೆ. ಕೊನೆಗೂ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು.