ಕ್ಯಾರೆಟ್ ಖೀರು

ಬೇಕಾಗುವ ಸಾಮಾಗ್ರಿಗಳು:

ಕ್ಯಾರೆಟ್ - 4-5
ಕ್ರೀಂ ಹಾಲು - ಅರ್ಧ ಲೀ.
ಸಕ್ಕರೆ - 2 ಕಪ್
ಏಲಕ್ಕಿ ಪುಡಿ - ಅರ್ಧ ಚಮಚ
ಗೋಡಂಬಿ ಮತ್ತು ಬಾದಾಮಿ ಚೂರುಗಳು

ಪಾಕ ವಿಧಾನ:

ಕ್ಯಾರೆಟನ್ನು ಚೆನ್ನಾಗಿ ತೊಳೆದು , ಅದರ ಸಂದುಗಳನ್ನೆಲ್ಲಾ ಕತ್ತರಿಸಿ ಕುಕ್ಕರಿನಲ್ಲಿ ಬೇಯಿಸಿ.

ಇನ್ನೊಂದು ಪಾತ್ರೆಯಲ್ಲಿ ಕ್ರೀಂ ಹಾಲನ್ನು ಕುದಿಸಿ ಒಂದು ಬದಿಗಿಡಿ.ಬೇಯಿಸಿದ ಕ್ಯಾರೆಟನ್ನು ಚೆನ್ನಾಗಿ ರುಬ್ಬಿ, ಇದನ್ನು ಕುದಿಸಿದ ಕ್ರೀಂ ಹಾಲಿಗೆ ಬೆರೆಸಿ ಒಲೆಯ ಮೇಲಿಟ್ಟು ಕಲಸುತ್ತಾ ಇರಿ.ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಸ್ವಲಪ್ ಹೊತ್ತು ಕಲಸುತ್ತಾ ಇರಿ.

ಕೊನೆಯಲ್ಲಿ ಇದರ ಮೇಲೆ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹರಡಿರಿ.

ವೆಬ್ದುನಿಯಾವನ್ನು ಓದಿ