ಮಾಡುವ ವಿಧಾನ- ನೆನೆ ಹಾಕಿದ 10 ಬಾದಾಮಿ, ನೆನೆಹಾಕಿದ 10 ಗೋಡಂಬಿ, ನೆನೆ ಹಾಕಿದ 10 ಪಿಸ್ತಾ, ಒಂದು ಚಮಚ ನೆನೆಹಾಕಿದ ಖುಸ್ ಖುಸ್, ಒಂದು ಲೀಟರ್ ಹಾಲು, ಒಂದು ಕಾಲು ಕಪ್ ಸಕ್ಕರೆ, ಚಿಟಿಕೆಯಷ್ಟು ಕೇಸರಿ. ಮಾಡುವ ವಿಧಾನ- ನೆನೆಹಾಕಿದ ಮೇಲೆ ಪಿಸ್ತಾ ಹಾಗೂ ಬಾದಾಮಿಯ ಸಿಪ್ಪೆ ತೆಗೆಯಿರಿ. ಖುಸ್ ಖುಸ್, ಬಾದಾಮಿ, ಪಿಸ್ತಾ, ಗೋಡಂಬಿ ಎಲ್ಲವನ್ನು ಸೇರಿಸಿ ರುಬ್ಬಿ ನುಣ್ಣನೆಯ ಪೇಸ್ಟ್ ಮಾಡಿ. ಹಾಲ್ನನು ಕುದಿಸಿ ಅದರ ಮುಕ್ಕಾಲು ಆಗುವವರೆಗೆ ಇಂಗಿಸಿ. ರುಬ್ಬಿದ ಪೇಸ್ಟ್ನು ಕುದಿಯುತ್ತಿರುವ ಹಾಲಿಗೆ ಹಾಕಿ. ಉರಿಯ್ನು ಸಣ್ಣಗಿಡಿ. ಸಕ್ಕರೆ ಹಾಕಿ. ಸಕ್ಕರೆ ಪೂರ್ತಿ ಕರಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಬಿಸಿ ಹಾಲಿನಲ್ಲಿ ಕರಗಿಸಿದ ಚಿಟಿಕೆಯಷ್ಟು ಕೇಸರಿಯ ಮಿಶ್ರಣವನ್ನು ಸೇರಿಸಿ. ಫ್ರಿಡ್ಜ್ನಲ್ಲಿಟ್ಟು ತಣ್ಣಗಾದ ಮೇಲೆ ಸವಿಯಿರಿ. ಡ್ರೈಫ್ರುಟ್ ಖೀರು ರೆಡಿ.