ಬೇಕಾಗುವ ಸಾಮಾಗ್ರಿಗಳು: ಬಟಾಟೆ - 250 ಗ್ರಾಂ ತುರಿದ ತೆಂಗಿನಕಾಯಿ - ಕಾಲು ಕಪ್ ತುಪ್ಪ - 150 ಗ್ರಾಂ ಸಕ್ಕರೆ - 300 ಗ್ರಾಂ ಗೋಡಂಬಿ - 25 ಗ್ರಾಂ ಒಣದ್ರಾಕ್ಷಿ - 25 ಗ್ರಾಂ ಕೇಸರಿಬಣ್ಣ - ಸ್ವಲ್ಪ ಲವಂಗ - 1 ಪೀಸ್ ರೋಸ್ ಎಸೆನ್ಸ್ - ಸ್ವಲ್ಪ
ಪಾಕ ವಿಧಾನ: ಮೊದಲಿಗೆ ಬಟಾಟೆಯನ್ನು ಬೇಯಿಸಿ ಅದನ್ನು ಚೆನ್ನಾಗಿ ಹಿಚುಕಿರಿ. ನಾನ್ ಸ್ಟಕ್ ಪಾತ್ರೆಯಲ್ಲಿ 100ಗ್ರಾಂ ತುಪ್ಪ ಹಾಕಿ ಅದು ಕರಗಿದ ನಂತರ, ಅದಕ್ಕೆ ಗೋಡಂಬಿ, ಒಣದ್ರಾಕ್ಷಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ತೆಂಗಿನತುರಿ ಬೆರೆಸಿ ಮತ್ತೊಮ್ಮೆ ಹುರಿಯಿರಿ.
ನಂತರ ಹಿಚುಕಿದ ಬಟಾಟೆಯನ್ನು ಹಾಕಿ 10-15 ನಿಮಿಷ ಸಣ್ಣ ಉರಿಯಲ್ಲಿ ಕಲಸುತ್ತಾ ಇರಿ. ಇದಕ್ಕೆ ಸಕ್ಕರೆ ಹಾಕಿ ಒಂದಕ್ಕೊಂದು ಅಂಟಿಕೊಳ್ಳದಂತೆ ಚೆನ್ನಾಗಿ ಮಿಶ್ರಮಾಡಿ.
ಕೊನೆಯಲ್ಲಿ, ಉಳಿದಿರುವ ತುಪ್ಪ, ಲವಂಗ ಮತ್ತು ರೋಸ್ ಎಸೆನ್ಸ್ ಸೇರಿಸಿ. ಇದು ಬಿಸಿ ಇರುವಾಗಲೇ ತಿನ್ನಲು ರುಚಿ.