ಸಿಹಿ ಕುಂಬಳಕಾಯಿ ರಾಯತ

ಬೇಕಾಗುವ ಸಾಮಗ್ರಿಗಳು:

ಕುಂಬಳಕಾಯಿ - 14 ಕೆ ಜಿ
ಹಸಿಮೆಣಸಿನಕಾಯಿ - 3 ರಿಂದ 4
ಕೊತ್ತಂಬರಿ - 14 ಬಟ್ಟಲು
ಉಪ್ಪು - ರುಚಿಗೆ ತಕ್ಕಷ್ಟು
ಮೊಸರು - 1ಬಟ್ಟಲು

ಪಾಕ ವಿಧಾನ:

ಮೊದಲಿಗೆ ಕುಂಬಳಕಾಯಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿ ಬೇಯಿಸಿಕೊಳ್ಳಿ. ಬೆಂದ ಕಾಳುಗಳನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಿ ಪುಡಿ ಮಾಡಿಕೊಳ್ಳಿ.

ಅದಕ್ಕೆ ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಬೆರಸಿ ಮೊಸರು ಹಾಕಿ ಕೆದಕಿರಿ. ಬೇಕಾದರೆ ಒಂದು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಹಾಕಬಹುದು.

ವೆಬ್ದುನಿಯಾವನ್ನು ಓದಿ