ಹಲಸಿನ ಹಣ್ಣಿನ ಹಲ್ವಾ

ಅಕ್ಕಿಯನ್ನು 2-3 ತಾಸು ನೆನೆಯಿಡಿ. ಅನಂತರ ಹಲಸಿನ ತೋಳೆ ಮತ್ತು ಕಾಯಿ ತುರಿಯೊಂದಿಗೆ ಅದನ್ನು ರುಬ್ಬಿಕೊಳ್ಳಿ. ಬೆಲ್ಲದ ಪುಡಿಯನ್ನು ಪಾತ್ರೆಗೆ ಹಾಕಿ, ನೀರು ಸೇರಿಸಿ ಒಲೆಯ ಮೇಲಿಡಿ. ಪಾಕ ಬಂದಾಗ ರುಬ್ಬಿಕೊಂಡಿರುವ ಹಲಸಿನ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ತುಪ್ಪವನ್ನು ಹಾಕಿ ಸೌಟಿನಿಂದ ಕಲಕುತ್ತ ಬೇಯಿಸಿ, ಹದ ಮಾಡಿ. ಅನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ತುಪ್ಪ ಸವರಿದ ತಟ್ಟೆಗೆ ಹಾಕಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ