ಮಾಲ್ಪುರಿ

ಬೇಕಾಗುವ ಸಾಮಾಗ್ರಿಗಳು:
ಮೈದಾ - 1 ಕಪ್
ರವೆ - ಕಾಲು ಕಪ್
ಮೊಸರು - 1 ಚಮಚ
ಬೇಕಿಂಗ್ ಸೋಡಾ - ಸ್ವಲ್ಪ
ಸಕ್ಕರೆ - 1 ಕಪ್
ನೀರು - 1 ಕಪ್
ಕರಿಯಲು ಎಣ್ಣೆ - ಸ್ವಲ್ಪ

ಪಾಕ ವಿಧಾನ:
ಮೊದಲಿಗೆ ಮೈದಾ ಮತ್ತು ರವೆಗೆ ಮೊಸರು, ನೀರು ಮತ್ತು ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಮಾಡಿ ಇಟ್ಟುಕೊಳ್ಳಿ.

ಸಕ್ಕರೆಯ ಪಾಕ ಮಾಡಿ, ಅದು ತಣ್ಣಗಾದ ಮೇಲೆ ಮಾಡಿಟ್ಟಿರುವ ಮೈದಾ, ರವೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ.

ಬಾಣಲೆಯಲ್ಲಿ ಎಣ್ಣೆ ಹಾಕಿ, ಈ ಮಿಶ್ರಣವನ್ನು ಸಣ್ಣ ದೋಸೆಯಾಕಾರದಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ.

ವೆಬ್ದುನಿಯಾವನ್ನು ಓದಿ