ಬಿಬಿಕೆ10: ವಿನಯ್-ಕಾರ್ತಿಕ್ ನಡುವೆ ಚಪ್ಪಲಿ ಏಟಿನ ಮಾರಾಮಾರಿ
ಈ ಬಾರಿ ಗಂಧರ್ವರು ಮತ್ತು ರಾಕ್ಷಸರು ಎಂಬ ಎರಡು ಗುಂಪು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಅದರಂತೆ ರಾಕ್ಷಸರಾದ ವಿನಯ್ ಗಂಧರ್ವರಾದ ಕಾರ್ತಿಕ್ ರಿಂದ ಕಷ್ಟದ ಟಾಸ್ಕ್ ಮಾಡಿಸುತ್ತಿದ್ದರು. ಸುಸ್ತಾಗಿದ್ದರೂ ಟಾಸ್ಕ್ ಎನ್ನುವ ಕಾರಣಕ್ಕೆ ಕಾರ್ತಿಕ್ ಮಾಡುತ್ತಿದ್ದರು. ಒಂದು ಹಂತದಲ್ಲಿ ಕಾರ್ತಿಕ್ ಮೇಲೆ ಕೋಪಗೊಂಡ ವಿನಯ್ ಚಪಾತಿ ಹಿಟ್ಟನ್ನು ಕಾರ್ತಿಕ್ ಮುಖಕ್ಕೆ ಎಸೆದರು. ಆಗ ಕಾರ್ತಿಕ್ ಕ್ಯಾಪ್ಟನ್ ಸ್ನೇಹಿತ್ ಗೆ ದೂರು ಹೇಳಲು ಹೊರಟಿದ್ದಾರೆ.
ಇದರಿಂದ ಮತ್ತಷ್ಟು ಸಿಟ್ಟಾದ ವಿನಯ್ ಚಪಾತಿ ಹಿಟ್ಟನ್ನು ಕಾರ್ತಿಕ್ ಬಾಯಿಗೆ ತುರುಕಲು ನೋಡಿದ್ದಾರೆ. ಈ ಗಲಾಟೆ ನಡುವೆ ಸಿಟ್ಟಿನಿಂದ ಕಾರ್ತಿಕ್ ತಮ್ಮ ಚಪ್ಪಲಿಯನ್ನು ನೆಲಕ್ಕೆ ಕುಕ್ಕಿದರು. ಆದರೆ ದುರದೃಷ್ಟವಶಾತ್ ಅದು ವಿನಯ್ ಮುಖಕ್ಕೆ ತಾಕಿತು. ಇದೇ ವಿಚಾರಕ್ಕೆ ರಂಪ ಮಾಡಿದ ವಿನಯ್ ಹೊಡೆಯಲು ಹೋದರು. ಬಳಿಕ ರೂಂಗೆ ಹೋಗಿ ಸೂಟ್ ಕೇಸ್ ತುಂಬಿ ನಾನು ಮನೆಯಿಂದ ಹೊರಹೋಗುತ್ತೇನೆ ಎಂದು ಕುಳಿತುಬಿಟ್ಟರು. ಆಗ ಮನೆಯ ಸದಸ್ಯರು ಸಮಾಧಾನ ಮಾಡಿಸಿ ಸುಮ್ಮನಾಗಿಸಿದರು. ಆದರೆ ಈ ಘಟನೆ ಈ ವಾರ ಕಿಚ್ಚನ ಮುಂದೆ ಬರುವುದಂತೂ ಖಂಡಿತಾ.