ಬಿಬಿಕೆ 10: ಎಲಿಮಿನೇಷನ್ ಭಯದಲ್ಲಿ ಎಂಟು ಮಂದಿ; ಹೊರಹೋಗುವವರು ಯಾರು?

ಶನಿವಾರ, 2 ಡಿಸೆಂಬರ್ 2023 (10:00 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಎಂಟು ಪ್ರಮುಖ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗುವ ಭಯದಲ್ಲಿದ್ದಾರೆ.

ಇಂದು ಮತ್ತೆ ವಾರಂತ್ಯದ ಕಿಚ್ಚನ ಜೊತೆಗಿನ ಮಾತುಕತೆ ನಡೆಯಲಿದೆ. ಎಂಟನೇ ವಾರಕ್ಕೆ ಎಂಟು ಜನ ನಾಮಿನೇಟ್ ಆಗಿದ್ದು  ಈ ಪೈಕಿ ಮನೆಯಿಂದ ಹೊರಗೆ ಯಾರು ಹೋಗಬಹುದು ಎಂಬ ಬಗ್ಗೆ ವೀಕ್ಷಕರಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈ ವಾರ ಮನೆಯಿಂದ ಹೊರಹೋಗಲು ವಿನಯ್, ತನಿಷಾ, ಸ್ನೇಹಿತ್ ಗೌಡ, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್ ಸೇರಿದಂತೆ ಘಟಾನುಘಟಿಗಳೆಲ್ಲರೂ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಮನೆಯಿಂದ ಹೊರಹೋಗುವವರು ಯಾರು ಎಂಬ ಕುತೂಹಲವಿದೆ.

ವೀಕ್ಷಕರು ಕಾರ್ತಿಕ್ ಅಥವಾ ಮೈಕಲ್ ಹೊರಹೋಗಬಹುದು ಎನ್ನುತ್ತಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದರೂ ನೀತು ಎಲಿಮಿನೇಟ್ ಆಗಿದ್ದರು. ಹೀಗಾಗಿ ಕಾರ್ತಿಕ್ ಈ ವಾರ ಕ್ಯಾಪ್ಟನ್ ಆಗಿದ್ದರೂ ಅವರ ಮೇಲೂ ಎಲಿಮಿನೇಷನ್ ನ ತೂಗುಗತ್ತಿಯಿದೆ. ಹೀಗಾಗಿ ಈ ವಾರಂತ್ಯದ ಎಪಿಸೋಡ್ ಕುತೂಹಲಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ