ಬಿಗ್ ಬಾಸ್ ಪ್ರೋಮೋ ಶೂಟ್ ಮುಗಿಸಿದ ಕಿಚ್ಚ ಸುದೀಪ್

ಶುಕ್ರವಾರ, 13 ಸೆಪ್ಟಂಬರ್ 2019 (10:18 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಪೂರ್ವಭಾವಿ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಪೈಲ್ವಾನ್ ಬಿಡುಗಡೆಯ ಬ್ಯುಸಿ ಶೆಡ್ಯೂಲ್ ನಡುವೆಯೇ ಕಿಚ್ಚ ಸುದೀಪ್ ಇದೀಗ ಬಿಗ್ ಬಾಸ್ 7 ಪ್ರೋಮೋ ಶೂಟ್ ಮುಗಿಸಿದ್ದಾರೆ.


ಪ್ರೋಮೋ ಶೂಟ್ ಗೆಂದೇ ವಿಶೇಷವಾಗಿ ಸೆಟ್ ಹಾಕಿ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ನೇತೃತ್ವದಲ್ಲಿ ವಿಶೇಷವಾಗಿ ಪ್ರೋಮೋ ಶೂಟ್ ಮಾಡಿದೆ. ಈ ಪ್ರೋಮೋ ಇಂದು ಸಂಜೆ 6.10 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ. ಆದರೆ ಶೋ ಯಾವಾಗಿನಿಂದ ಆರಂಭವಾಗಲಿದೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ