ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!
ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಸಮೀರ್ ಆಚಾರ್ಯ ಮತ್ತು ದಿವಾಕರ್ ಜತೆಗೆ ಅನುಪಮಾ ಹಾಗೂ ಚಂದನ್ ಮದುವೆ ಬಗ್ಗೆ ಜೋರು ಜೋರಾಗಿ ಚರ್ಚೆ ನಡೆಸುತ್ತಿದ್ದರು. ಈ ನಡುವೆ ಚಂದನ್ ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಹೇಳುತ್ತಿದ್ದರು.
ಈ ಸಂದರ್ಭದಲ್ಲಿ ಸಮೀರ್ ಹಾಗೂ ಚಂದನ್ ಅನುಪಮಾಗೆ ಮದುವೆಯಾಗುವಂತೆ ಸಲಹೆ ಕೊಟ್ಟರು. ಆದರೆ ಅನುಪಮಾ ನನಗೆ ಸಿಂಗಲ್ ಆಗಿಯೇ ಇರಲು ಇಷ್ಟ. ವಂಶ ಬೆಳೆಸಲು ನನ್ನ ತಂಗಿ ಇದ್ದಾಳೆ. ನಾನು ಮದುವೆ ಆಗಲ್ಲಪ್ಪಾ. ಯಾರಿಗೆ ಬೇಕು ಸಂಸಾರ ಕಷ್ಟ ಎಂದು ಹೇಳಿಕೊಂಡರು. ಈ ಸಂದರ್ಭದಲ್ಲಿ ಸಮೀರ್ ಆಚಾರ್ಯ ಮಂತ್ರ ಹೇಳಿ ಇಬ್ಬರಿಗೂ ಮದುವೆಯೇ ಮಾಡಿಸಿಬಿಟ್ರು!