ಬಿಗ್ ಬಾಸ್ ಕನ್ನಡ: ಸಂಯುಕ್ತಾ ಕಿರಿಕ್ ಗೆ ಮನೆಮಂದಿ ಜತೆಗೆ ರೊಚ್ಚಿಗೆದ್ದ ಅಭಿಮಾನಿಗಳು
ಗುರುವಾರ, 14 ಡಿಸೆಂಬರ್ 2017 (09:43 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸೆಲೆಬ್ರಿಟಿಯಾಗಿ ಎಂಟ್ರಿ ಹೊಡೆದ ಕಿರಿಕ್ ಪಾರ್ಟಿ ಹೀರೋಯಿನ್ ಸಂಯುಕ್ತಾ ಹೆಗಡೆ ವರ್ತನೆ ಮನೆಯವರಿಗೆ ಇಷ್ಟವಾಗುತ್ತಿಲ್ಲ.
ಸೆಲೆಬ್ರಿಟಿಯಾಗಿ ಸಂಯುಕ್ತಾ ಬಂದಿರುವುದು ಸ್ಪರ್ಧಿಗಳಿಗೆ ಗೊತ್ತಿಲ್ಲ. ಸಂಯುಕ್ತಾ ಸ್ಪರ್ಧಿಯೆಂದೇ ಅಂದುಕೊಂಡಿರುವ ಮನೆಯ ಇತರ ಸದಸ್ಯರು ಆಕೆಯ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಪ್ಟನ್ ಆಗಿ ಈ ವಾರ ಕೃಷಿ ತಾಪಂಡ ಆಯ್ಕೆಯಾಗಿದ್ದರೂ ಟಾಸ್ಕ್ ನಡೆಯುವಾಗ ರೂಲ್ಸ್ ಬಗ್ಗೆ ಕ್ಯಾಪ್ಟನ್ ಗಿಂತ ಹೆಚ್ಚು ಮಾತನಾಡುವ ಸಂಯುಕ್ತಾ ಮೇಲೆ ದಿವಾಕರ್ ನೇರವಾಗಿ ಕಿಡಿ ಕಾರಿದ್ದಾರೆ.
ಅಷ್ಟೇ ಅಲ್ಲ, ಮನೆಯೊಳಗೆ ಬಂದ ತಕ್ಷಣವೇ ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್ ವೃತ್ತಿ ಬಗ್ಗೆ ಹಗುರವಾಗಿ ಮಾತನಾಡಿದ್ದು ಅವರಿಗೆ ಅಸಮಾಧಾನ ಮೂಡಿಸಿದೆ. ಅಂತೂ ಮನೆಯವರೆಲ್ಲರಿಗೂ ಸಂಯುಕ್ತಾ ಕಿರಿಕ್ ಇಷ್ಟವಾಗುತ್ತಿಲ್ಲ.
ಸ್ಪರ್ಧಿಗಳಿಗೆ ಮಾತ್ರವಲ್ಲ, ಬಿಗ್ ಬಾಸ್ ಅಭಿಮಾನಿಗಳೂ ಸಂಯುಕ್ತಾ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ. ಪದೇ ಪದೇ ನಿವೇದಿತಾ ಬಗ್ಗೆ ಕಾಮೆಂಟ್ ಮಾಡುವುದು, ಅತಿಯಾಗಿ ಪ್ರತಿಕ್ರಿಯೆ ನೀಡುವುದು, ರೂಲ್ಸ್ ಬಗ್ಗೆ ಮಾತನಾಡುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಜಾಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ