ಕಲರ್ಸ್ ಕನ್ನಡ ವಾಹಿನಿಯ ಎರಡು ಜನಪ್ರಿಯ ಧಾರವಾಹಿಗಳು ಕೊನೆ

ಸೋಮವಾರ, 12 ಆಗಸ್ಟ್ 2019 (09:15 IST)
ಬೆಂಗಳೂರು: ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಮೆಗಾ ಧಾರವಾಹಿಗಳು ಕೊನೆಗೊಳ್ಳುತ್ತಿದ್ದು, ಕೊನೆಯ ಕೆಲವೇ ಸಂಚಿಕೆಗಳು ಪ್ರಸಾರವಾಗುತ್ತಿದೆ.


ಸಂಜೆ 5 ಗಂಟೆಗೆ ಪ್ರಸಾರವಾಗುವ ಕುಲವಧು ಮತ್ತು 5.30 ಕ್ಕೆ ಪ್ರಸಾರವಾಗುವ ಕಿನ್ನರಿ ಧಾರವಾಹಿಗಳು ಮುಕ್ತಾಯ ಕಾಣುತ್ತಿವೆ. ಕುಲವಧು 1500 ಕ್ಕೂ ಹೆಚ್ಚು ಕಂತುಗಳನ್ನು ಪೂರೈಸಿದ್ದರೆ, ಕಿನ್ನರಿ ಕೂಡಾ 1000 ಕಂತುಗಳನ್ನು ದಾಟಿದೆ.

ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ಜೈಮಾತಾ ಕಂಬೈನ್ಸ್ ಕುಲವಧು ಸಕ್ಸಸ್ ಮೀಟ್ ಆಯೋಜಿಸಿತ್ತು. ಇದೀಗ ಕೊನೆಯ ಕಂತುಗಳು ಪ್ರಸಾರವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ