ಜೊತೆ ಜೊತೆಯಲಿ ಧಾರವಾಹಿ ಬಗ್ಗೆ ವೀಕ್ಷಕರ ಬೇಸರ! ಕಾರಣವೇನು ಗೊತ್ತಾ?

ಗುರುವಾರ, 7 ನವೆಂಬರ್ 2019 (09:37 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಕನ್ನಡದ ಎಲ್ಲಾ ಧಾರವಾಹಿಗಳೂ ಮಾಡದಷ್ಟು ರೇಟಿಂಗ್ ಪಾಯಿಂಟ್ ಪಡೆದು ಆರಂಭದಿಂದಲೇ ದಾಖಲೆ ಮಾಡಿದೆ. ಆದರೆ ಧಾರವಾಹಿ ಬಗ್ಗೆ ಈಗ ಪ್ರೇಕ್ಷಕರು ಬೇಸರವಾಗಿದೆ. ಅದಕ್ಕೆ ಕಾರಣವೇನು ಗೊತ್ತಾ?


ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ನಾಯಕರಾಗಿರುವ ಜೊತೆ ಜೊತೆಯಲಿ ಧಾರವಾಹಿ 45 ವರ್ಷ ವಯಸ್ಸಿನ ಆರ್ಯವರ್ಧನ್ ಮತ್ತು 21 ವರ್ಷದ ಅನು ಎಂಬ ಯುವತಿಯ ನಡುವಿನ ಪ್ರೇಮಕತೆಯಾಗಿದೆ. ಈ ಧಾರವಾಹಿಯಲ್ಲಿ ಶ್ರೀಮಂತಿಕೆ ಮತ್ತು ಮಧ್ಯಮ ವರ್ಗದ ಕುಟುಂಬದ ವಾಸ್ತವಿಕ ಚಿತ್ರಣ ಪ್ರೇಕ್ಷಕರನ್ನು ಸೆಳೆದಿತ್ತು.

ಆದರೆ ಈಗ ಧಾರವಾಹಿಯಲ್ಲಿ ನಾಯಕಿ ಅನು ಬೇರೆ ಹುಡುಗನ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಕತೆ ನಡೆಯುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದಲೂ ಇದೇ ಟ್ರ್ಯಾಕ್ ನಡೆಯುತ್ತಿದ್ದು, ಯಾವುದೇ ಟ್ವಿಸ್ಟ್ ನೀಡುತ್ತಿಲ್ಲ. ಹೀಗೇ ಆದರೆ ಎಲ್ಲಾ ಧಾರವಾಹಿಗಳಂತೇ ಇದೂ ಆಗಲಿದೆ. ಈ ರೀತಿ ಮಾಡಬೇಡಿ ಎಂದು ಪ್ರೇಕ್ಷಕರು ಧಾರವಾಹಿ ತಂಡಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ