ಕತೆ ನಿಲ್ಲಿಸಿದ ‘ಮಗಳು ಜಾನಕಿ’: ಇನ್ನು 10 ದಿನ ಮಾತ್ರ ಪ್ರಸಾರ

ಗುರುವಾರ, 28 ಮೇ 2020 (10:46 IST)
ಬೆಂಗಳೂರು: ಟಿಎನ್ ಸೀತಾರಾಮ್ ನಿರ್ದೇಶನದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ‘ಮಗಳು ಜಾನಕಿ’ ಪ್ರಸಾರ ಕೊನೆಗೊಳಿಸುತ್ತಿದೆ.


ಕಲರ್ಸ್ ಸೂಪರ್ ಚಾನೆಲ್ ಬಂದ್ ಆಗಲಿದೆ. ಬೇರೆ ಚಾನೆಲ್ ಗೂ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೇ ಜನಪ್ರಿಯ ಧಾರವಾಹಿ ಕೊನೆಗೊಳಿಸಲಾಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಆದರೆ ಕೊನೆಯ 10 ಕಂತುಗಳ ಚಿತ್ರೀಕರಣ ಈಗಾಗಲೇ ನಡೆದಿದ್ದು, ಆ ಸಂಚಿಕೆಗಳು ಜೂನ್ 1 ರಿಂದ ಪ್ರಸಾರವಾಗಲಿದೆ. ಹೀಗಾಗಿ ಧಾರವಾಹಿಗೆ ಒಂದು ಅಂತ್ಯ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ