ಅಪ್ಪನಾದ ಶೈನ್ ಶೆಟ್ಟಿ! ಅಭಿಮಾನಿಗಳಿಗೆ ಖುಷಿಯೋ ಖುಷಿ

ಗುರುವಾರ, 28 ಮೇ 2020 (09:28 IST)
ಬೆಂಗಳೂರು: ಬಿಗ್ ಬಾಸ್ ಬಳಿಕ ನಟ ಶೈನ್ ಶೆಟ್ಟಿ ಕೆಲವು ಸಿನಿಮಾ ಮಾಡುವ ಸುದ್ದಿ ಬಂದಿತ್ತು. ಇದರ ನಡುವೆ ಲಾಕ್ ಡೌನ್ ನಲ್ಲಿ ಸಮಾಜ ಸೇವೆ ಮಾಡುವುದರಲ್ಲಿ ಶೈನ್ ತೊಡಗಿಸಿಕೊಂಡಿದ್ದರು. ಅದರ ನಡುವೆ ಅವರ ಹೊಸ ವಿಡಿಯೋವೊಂದು ಈಗ ವೈರಲ್ ಆಗಿದೆ.


ಲಾಕ್ ಡೌನ್ ಬಳಿಕ ಕಿರುತೆರೆ ಮತ್ತೆ ಹೊಸ ಎಪಿಸೋಡ್ ಗಳೊಂದಿಗೆ ಬರುತ್ತಿದೆ. ಕಲರ್ಸ್ ವಾಹಿನಿ ಈಗ ಹೊಸ ಪ್ರೋಮೋ ಹರಿಯಬಿಟ್ಟಿದ್ದು ಈ ವಿಡಿಯೋದಲ್ಲಿ ಶೈನ್ ಅಪ್ಪನ ಪಾತ್ರ ಮಾಡಿದ್ದಾರೆ. ಅವರಿಗೆ ಜತೆಯಾಗಿ ಲಕ್ಷ್ಮೀ ಬಾರಮ್ಮಾ ಜೋಡಿ ನೇಹಾ ಅಲಿಯಾಸ್ ಗೊಂಬೆ ಇದ್ದಾರೆ.

ಲಾಕ್ ಡೌನ್ ನಲ್ಲಿ ಅಮ್ಮ ಮಾಡುವ ಕೆಲಸ ಮಾಡುವ ಅಪ್ಪ ಪಡುವ ಫಜೀತಿಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ನೋಡಿ ನೀವು ಒಳ್ಳೆಯ ಅಪ್ಪ ಆಗುತ್ತೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಜತೆಗೆ ಹಳೆಯ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ