ಲಾಕ್ ಡೌನ್ ವೇಳೆ ಮತ್ತೆ ಶುರುವಾಯ್ತು ‘ಮಹಾಭಾರತ’

ಶುಕ್ರವಾರ, 14 ಮೇ 2021 (09:07 IST)
ಬೆಂಗಳೂರು: ಕಳೆದ ಬಾರಿ ಲಾಕ್ ಡೌನ್ ವೇಳೆ ದೈನಂದಿನ ಧಾರವಾಹಿಗಳಿಲ್ಲದೇ ಡಬ್ಬಿಂಗ್ ಆದ ಪೌರಾಣಿಕ ಧಾರವಾಹಿಗಳೇ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಿತ್ತು.


ಈ ಬಾರಿ ಮತ್ತೆ ಅದೇ ಸ್ಥಿತಿ ಬಂದಿದೆ. ವೀಕ್ಷಕರ ಒತ್ತಾಯದ ಮೇರೆ ಸ್ಟಾರ್ ಸುವರ್ಣ ವಾಹಿನಿ ಮತ್ತೆ ಮಹಾಭಾರತ ಧಾರವಾಹಿಯನ್ನು ಪ್ರಸಾರ ಮಾಡಲು ನಿರ್ಧರಿಸಿದೆ.

ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ 8.30 ರ ತನಕ ಅಂದರೆ ಬರೋಬ್ಬರಿ ಎರಡೂವರೆ ತಾಸು ಮಹಾಭಾರತ ಧಾರವಾಹಿ ಪ್ರಸಾರವಾಗಲಿದೆ. ಡಬ್ಬಿಂಗ್ ಆಗಿದ್ದರೂ ಈ ಧಾರವಾಹಿ ಕನ್ನಡದಲ್ಲೂ ಜನಪ್ರಿಯತೆ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ