ನೆರೆ ಪರಿಹಾರಕ್ಕಾಗಿ ಕೋಟ್ಯಾಧಿಪತಿ ಶೋಗೆ ಬಂದ ಸಂಸದ ತೇಜಸ್ವಿ, ಪ್ರತಾಪ್ ಸಿಂಹಗೆ ಟ್ರೋಲ್ ಬಿಸಿ!

ಶುಕ್ರವಾರ, 6 ಸೆಪ್ಟಂಬರ್ 2019 (09:09 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಈ ವಾರ ಸ್ಪರ್ಧಿಗಳಾಗಿ ಬಂದ ಸಂಸದರಾ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.


ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಈ ಶೋನಲ್ಲಿ ಆಡಿ ಗೆದ್ದ ಹಣವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ. ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಿದ್ದಾರೆ.

ಸಂಸದರಾಗಿ ನಿಮಗೆ ಪರಿಹಾರ ಕೊಡಲು ಕೋಟ್ಯಾಧಿಪತಿ ಶೋ ಬೇಕಾ? ತಾಕತ್ತಿದ್ದರೆ ಕೇಂದ್ರದಿಂದ ಪರಿಹಾರ ತನ್ನಿ. ಅದು ಬಿಟ್ಟು ಕೇವಲ 2 ಕೋಟಿ ರೂ. ಹಣ ಗೆದ್ದು ಸಂತ್ರಸ್ತರಿಗೆ ಕೊಡುತ್ತಿದ್ದೀರಾ ಎಂದು ಕೆಲವರು ಸಂಸದರನ್ನು ಟ್ರೋಲ್ ಮಾಡಿದ್ದಾರೆ. ಈ ಕಾರ್ಯಕ್ರಮ ಈ ವಾರ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ