ತನಗಿಂತ 14 ವರ್ಷ ಕಿರಿಯವಳನ್ನು ವಿವಾಹವಾಗಲಿರುವ ಈ ನಟ!

ಶುಕ್ರವಾರ, 31 ಮಾರ್ಚ್ 2017 (09:21 IST)
ಮುಂಬೈ: ಈ ಕಿರುತೆರೆ ನಟ ಕೊನೆಗೂ ಮದುವೆಯಾಗಲು ನಿರ್ಧರಿಸಿದ್ದಾರೆ. ಅದೂ ತನಗಿಂತ 14 ವರ್ಷ ಕಿರಿಯವಳನ್ನು.  ಸ್ಟಾರ್ ಪ್ಲಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ‘ದಿಯಾ ಔರ್ ಬಾತೀ ಹಮ್’ ಧಾರವಾಹಿಯ ನಟ ಅನಾಸ್ ರಶೀದ್ ಈ ನಟ.

 

ದಿಯಾ ಔರ್ ಬಾತೀ ಹಮ್ ಧಾರವಾಹಿಯ ಕನ್ನಡ ಅವತರಣಿಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿತ್ತು. ಆಕಾಶದೀಪ ಧಾರವಾಹಿಯ ಮೂಲ ದಿಯಾ ಔರ್ ಬಾತೀ. ಆ ಧಾರವಾಹಿ ಮೂಲಕ ಭಾರೀ ಜನಪ್ರಿಯರಾಗಿದ್ದ ಅನಾಸ್ ಕೊನೆಗೂ ಮದುವೆಯಾಗುವ ಮನಸ್ಸು ಮಾಡಿದ್ದಾರೆ.

 
ಅನಾಸ್ ಗೆ ಈಗ 38 ವರ್ಷ. ಆತ ಕೈ ಹಿಡಿಯಲಿರುವ ಹೀನಾ 24 ವರ್ಷದಾಕೆ. ಪಂಜಾಬ್ ಮೂಲದವರಾದ ಅನಾಸ್, ಮನೆಯವರು ನಿಶ್ಚಿಯಿಸಿದ ಪಂಜಾಬಿ ಹುಡುಗಿಯನ್ನೇ ಮದುವೆಯಾಗುತ್ತಿದ್ದಾರೆ. ಆದರೆ ಇಬ್ಬರ ನಡುವಿನ ವಯಸ್ಸಿನ ಅಂತರ ಮಾತ್ರ 14 ವರ್ಷ!

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ