ಬೆಂಗಳೂರು: ಧಾರವಾಹಿಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ವಿಶೇಷವೇನಲ್ಲ. ಅದೇ ರೀತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಲಕ್ಷ್ಮೀ ಬಾರಮ್ಮದ ಹೀರೋ ಪಾತ್ರಧಾರಿ ಬದಲಾಗಿದ್ದಾರೆ.
ಇದೀಗ ನಾಲ್ಕನೇ ಬಾರಿಗೆ ನಾಯಕ ಪಾತ್ರಧಾರಿ ಬದಲಾಗಿದ್ದಾರೆ. ಇದುವರೆಗೆ ನಾಯಕರಾಗಿದ್ದ ಶೈನಿ ಶೆಟ್ಟಿ ಧಾರವಾಹಿಯಿಂದ ಮಾಯವಾಗಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾ ಅವಕಾಶ. ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿರುವುದರಿಂದ ಚಂದು ಪಾತ್ರಧಾರಿ ಶೈನಿ ಧಾರವಾಹಿಯಿಂದ ಹೊರ ಬಿದ್ದಿದ್ದಾರೆ.
ಅವರ ಬದಲಿಗೆ ಜೀ ಕನ್ನಡ ವಾಹಿನಿಯ ಗೃಹಲಕ್ಷ್ಮಿ ಧಾರವಾಹಿ ಖ್ಯಾತಿಯ ಚಂದು ಗೌಡ ಬಂದಿದ್ದಾರೆ. ನನ್ನದೇ ಹೆಸರಿನ ಪಾತ್ರ ನಿರ್ವಹಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಚಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ