ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ನಡೆಯುತ್ತಿರುವ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಶ್ರೀ ವೆಂಕಟೇಶ್ವರ ದೇವಾಲಯದ ಧ್ವಜಸ್ತಂಭದಲ್ಲಿ ಗುರುವಾರ ಗರುಡ ಧ್ವಜಾರೋಹಣ ಮಾಡಲಾಯಿತು.
ರಾತ್ರಿ ಹತ್ತು ಗಂಟೆಯ ವೇಳೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪೆದ್ದ (ದೊಡ್ಡ ) ಶೇಷ ವಾಹನದಲ್ಲಿ ಕುಳ್ಳಿರಿಸಿ ಮುಖ್ಯ ದೇವಾಲಯದ ಸುತ್ತ ಇರುವ ನಾಲ್ಕು ಬೀದಿಗಳಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಸವಾರಿ ನಡೆಸಲಾಯಿತು.
ಸಾವಿರ ಹೆಡೆಯ ಆದಿ ಶೇಷನ ಮೇಲೆ ವೈಕುಂಠದಲ್ಲಿರುವ ಮಹಾ ವಿಷ್ಣು ವಿರಮಿಸುವ ಸಂಕೇತವಾಗಿ ಬ್ರಹ್ಮೋತ್ಸವದಲ್ಲಿ ಶೇಷ ವಾಹನ ಮೆರವಣಿಗೆ ನಡೆಸಲಾಗುತ್ತದೆ. ಭಕ್ತಾದಿಗಳು ಸಂಭ್ರಮದಿಂದ ಭಾಗವಹಿಸಿದ್ದರು.
ತಿರುಮಲ ಬೆಟ್ಟವು ಆದಿಶೇಷನ ಮೇಲೆಯೇ ಇದೆ ಎಂದು ನಂಬಲಾಗಿದ್ದು, ಈ ಹಿನ್ನೆಲೆಯಲ್ಲಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸರ್ಪದ ಮಾದರಿಯಲ್ಲಿರುವ ವಾಹನ ಚಿನ್ನ (ಸಣ್ಣ)ಶೇಷ ವಾಹನ, ಪೆದ್ದ (ದೊಡ್ಡ)ಶೇಷ ವಾಹನಗಳನ್ನು ಬ್ರಹ್ಮೋತ್ಸವದ ಮೊದಲ ಎರಡು ದಿನ ಮೆರವಣಿಗೆ ನಡೆಸಲಾಗುತ್ತದೆ.
WD
ಅಕ್ಟೋಬರ್ 1ರಂದು ಬೆಳಗ್ಗೆ ಚಿನ್ನ(ಚಿಕ್ಕ) ಶೇಷ ವಾಹನ ಮುತ್ಯಾಪು ಪುಂದಿರಿ ವಾಹನ, ಅ. 2 ರ ಬೆಳಗ್ಗೆ ಕಲ್ಪವೃಕ್ಷ ವಾಹನ ಸಂಜೆ ಸರ್ವ ಭೂಪಾಲ ವಾಹನ ಕಾರ್ಯಕ್ರಮ ನಡೆಯಲಿದೆ.