ಸೆ.18 ಸಂಜೆ ಸರ್ವಭೂಪಾಲ ವಾಹನೋತ್ಸವ

ಸೆ.18ರ ರಾತ್ರಿ, ಉಯ್ಯಾಲೆ ಸೇವೆ ನಡೆದ ಬಳಿಕ, ವಿಗ್ರಹಗಳ ಮೆರವಣಿಗೆಯು ಸರ್ವಭೂಪಾಲ ವಾಹನದಲ್ಲಿ ನಡೆಯುತ್ತದೆ.

ಸರ್ವಭೂಪಾಲ ಎಂದರೆ ಭೂಮಿಯ ಮೇಲಿರುವ ಎಲ್ಲಾ ರಾಜರು ಎಂದರ್ಥ. ಹಿಂದೂ ಧರ್ಮದ ಪ್ರಕಾರ, ವಿಷ್ಣುವಿನಂತೆಯೇ, ರಾಜರು ಕೂಡ ಪಾಲನ ಕರ್ತೃಗಳಾಗಿದ್ದು, ತಮ್ಮ ಪ್ರಜೆಗಳನ್ನು ಪಾಲಿಸುವ ಹೊಣೆ ಹೊತ್ತಿದ್ದಾರೆ.

ಮಹಾವಿಷ್ಣುವು ನೀಡುತ್ತಿರುವ ರಕ್ಷಣೆ, ವರಪ್ರಸಾದಕ್ಕಾಗಿ ಆತನಿಗೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲಾ ರಾಜರು ಬ್ರಹ್ಮೋತ್ಸವದ ನಾಲ್ಕನೇ ದಿನ ಸರ್ವಭೂಪಾಲ ವಾಹನದ ರೂಪ ತಾಳುತ್ತಾರೆ ಎಂಬುದು ಪ್ರತೀತಿ.

ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ.....ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಸರ್ವಭೂಪಾಲವಾಹನ.... ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ....... ಬೆಳಿಗ್ಗೆ 6.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
ಸರ್ವದರ್ಶನ........ರಾತ್ರಿ 7.00ಗಂಟೆಯಿಂದ ಮಧ್ಯರಾತ್ರಿ 12.30 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ