ಸೆ.19 ಸಂಜೆ ಗರುಡವಾಹನ ಉತ್ಸವ

ಸೆ.19ರ ರಾತ್ರಿ, ಉಯ್ಯಾಲೆ ಸೇವೆ ಆದ ಬಳಿಕ, ಪರಿವಾರ ದೇವರುಗಳೊಂದಿಗೆ ವೆಂಕಟೇಶ್ವರನನ್ನು ಗರುಡ ವಾಹನದಲ್ಲಿ ಕುಳ್ಳಿರಿಸಲಾಗುತ್ತದೆ.

ಪುರಾಣದ ಪ್ರಕಾರ, ಪಕ್ಷಿರಾಜ ಗರುಡನು ವೇದಗಳ ಪ್ರತಿರೂಪ. ಮಹಾವಿಷ್ಣುವು ವೇದಗಳ ಒಡೆಯ. ಆದುದರಿಂದಾಗಿ ದೇವರು ತನ್ನನ್ನು ಗರುಡನ ಮೇಲೆ ಕಾಣುತ್ತಾನೆ. ವೈಷ್ಣವ ಪುರಾಣಗಳಲ್ಲಿ ಹೇಳುವಂತೆ, ಗರುಡನನ್ನು ಪೆರಿಯತಿರುವದಿ (ಮೊದಲ ಭಕ್ತಾಗ್ರೇಸರ) ಎಂದೂ ಉಲ್ಲೇಖಿಸಲಾಗಿದೆ.

ಆದುದರಿಂದಾಗಿಯೇ ಶ್ರೀವೆಂಕಟೇಶ್ವರನು ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ದಿನದಂದು ಗರುಡನನ್ನು ತನ್ನ ವಾಹನವಾಗಿ ಆರಿಸಿಕೊಳ್ಳುತ್ತಾನೆ. ಎಲ್ಲಾ ವಾಹನ ಉತ್ಸವಗಳಲ್ಲಿ ಗರುಡ ವಾಹನೋತ್ಸವವು ಅತ್ಯಂತ ಜನಾಕರ್ಷಣೀಯವಾದುದು ಮತ್ತು ಮಹತ್ತರವೂ ಆದುದು. ಈ ದಿನ ಭಕ್ತಾದಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ.

ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ....ಸಾಯಂಕಾಲ 5.30 ಗಂಟೆಯಿಂದ 6.30 ಗಂಟೆಯವರೆಗೆ
ಗರುಡ ಸೇವಾ........ರಾತ್ರಿ 9.00 ಗಂಟೆಯಿಂದ ಮಧ್ಯರಾತ್ರಿ 1.00 ಗಂಟೆಯವರೆಗೆ
ಸರ್ವದರ್ಶನ.........ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ
ಸರ್ವದರ್ಶನ ..........ಸಾಯಂಕಾಲ 5.30 ಗಂಟೆಯಿಂದ ಮಧ್ಯರಾತ್ರಿ 1.00 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ