100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ

ಬುಧವಾರ, 20 ಅಕ್ಟೋಬರ್ 2021 (08:38 IST)
ನವದೆಹಲಿ : ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು, ಒಟ್ಟಾರೆ ಮಂಗಳವಾರ ಬೆಳಗ್ಗೆ 7 ಗಂಟೆಯವರೆಗೆ 98.67 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲಿ ಆ ಸಂಖ್ಯೆ 100 ಕೋಟಿ ದಾಟಲಿದೆ.

ಈಗಾಗಲೇ 69,91,16,940 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಅದರಲ್ಲಿ 28,76,52,471 ಮಂದಿ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (12 ಕೋಟಿ) ಡೋಸ್ ಲಸಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 9.20 ಕೋಟಿ, ಪಶ್ಚಿಮ ಬಂಗಾಳ 6.75 ಕೋಟಿ, ಗುಜರಾತ್ನಲ್ಲಿ 6.72 ಕೋಟಿ, ಮಧ್ಯಪ್ರದೇಶದಲ್ಲಿ 6.66, ಬಿಹಾರದಲ್ಲಿ 6.26 ಕೋಟಿ, ಕರ್ನಾಟಕದಲ್ಲಿ 6.11 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ