ಇಹಲೋಕ ತ್ಯಜಿಸಿದ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್

ಭಾನುವಾರ, 12 ಆಗಸ್ಟ್ 2018 (15:22 IST)
ಲಂಡನ್ : ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಕಾದಂಬರಿಕಾರ ವಿ.ಎಸ್.ನೈಪಾಲ್ (85) ಇಂದು ಮುಂಜಾನೆ ಲಂಡನ್‍ನಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಈ ವಿಚಾರವನ್ನು ಅವರ ಪತ್ನಿ ಬ್ರಿಟಿಷ್ ಪ್ರೆಸ್ ಅಸೋಸಿಯೇಷನ್ ಗೆ ತಿಳಿಸಿದ್ದಾರೆ. ಭಾರತದ ರಾಜಕೀಯ, ಭ್ರಷ್ಟಾಚಾರ, ಸಾಮ್ರಾಜ್ಯ ಶಾಹಿ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಅಭಿಪ್ರಾಯಗಳನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸಿದ್ದ ನೈಪಾಲ್ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.


2001ರಲ್ಲಿ 1ಮಿಲಿಯನ್ ಡಾಲರ್ ಮೊತ್ತದ ನೊಬೆಲ್ ಸಾಹಿತ್ಯ ಪಾರಿತೋಷಕವನ್ನು ಪಡೆದಿದ್ದ ಟ್ರಿನಿಡಾಡ್ ಸಂಜಾತ ನೈಪಾಲ್ ಅವರು, 1971ರಲ್ಲಿ ಬೂಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. 1990ರಲ್ಲಿ ಕ್ವೀನ್ ಎಲಿಜಬೆತ್ ಅವರು ನೈಪಾಲ್ ಅವರಿಗೆ 'ನೈಟ್ ಹುಡ್' ಗೌರವ ನೀಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ