SBI ಹೆಸರಲ್ಲಿ ಬಂದ ಎಲ್ಲಾ ಮೆಸೇಜ್ ಗಳೂ ಬ್ಯಾಂಕ್ ಕಳಿಸಿದ್ದಲ್ಲವಂತೆ,

ಗುರುವಾರ, 29 ಜುಲೈ 2021 (10:30 IST)
State Bank SMS: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೇಶದ 420 ಮಿಲಿಯನ್ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುತ್ತಿದೆ ಹೆಚ್ಚಿನ ಸಂಖ್ಯೆಯ ಬಳಕೆದಾರರ ಕಾರಣದಿಂದಾಗಿ, ಬ್ಯಾಂಕ್ ನಿಯಮಿತವಾಗಿ ತನ್ನ ಗ್ರಾಹಕರೊಂದಿಗೆ ಭದ್ರತಾ ನವೀಕರಣಗಳನ್ನು ಹಂಚಿಕೊಳ್ಳುತ್ತದೆ ಮತ್ತು ಅವರ ಬ್ಯಾಂಕ್ ಖಾತೆಗಳು ಮತ್ತು ಆರ್ಥಿಕ ಯೋಗಕ್ಷೇಮದ ವಿರುದ್ಧ ಸಂಭಾವ್ಯ ಫಿಶಿಂಗ್, ಹ್ಯಾಕಿಂಗ್ ಅಥವಾ ವಂಚನೆ ಪ್ರಯತ್ನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಎಲ್ಲಾ ಬ್ಯಾಂಕ್ಗಳು ಯಾವುದೇ ಅಪ್ಡೇಟ್ಗಳ ಕುರಿತು ತನ್ನ ಗ್ರಾಹಕರಿಗೆ ಮಾಹಿತಿ ನೀಡುತ್ತಿರುತ್ತದೆ. ಅದಾಗ್ಯೂ ಒಮ್ಮೊಮ್ಮೆ ವಂಚನೆಯ ಜಾಲಕ್ಕೆ ಸಿಲುಕಿಬಿಡುತ್ತಾರೆ ಹಾಗೂ ತಮ್ಮಲ್ಲಿದ್ದ ಹಣವನ್ನು ಕಳೆದುಕೊಂಡು ಬಿಡುತ್ತಾರೆ. ಇದೀಗ ಗ್ರಾಹಕರಿಗೆ ದೊರೆಯ ಸಂದೇಶವನ್ನು ಎಸ್ಬಿಐ ಕಳುಹಿಸಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ವಿಧಾನವೊಂದನ್ನು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.
ಈ ಕುರಿತು ಎಸ್ಬಿಐ ಟ್ವಿಟರ್ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ನೀವು ಯಾರನ್ನಾದರೂ ಅನುಮತಿಸುವ ಮುನ್ನ ಬಾಗಿಲ ಹಿಂದೆ ಯಾರಿದ್ದಾರೆ ಎಂಬುದನ್ನು ಪರಿಶೀಲಿಸಿ ಎಂದು ತಿಳಿಸಿದೆ. ಅಂದರೆ ಯಾವುದೇ ಸಂದೇಶವನ್ನು ಸ್ವೀಕರಿಸುವ ಮೊದಲು ಇಲ್ಲವೇ ಆ ವ್ಯಕ್ತಿಯನ್ನು ಅನುಸರಿಸುವ ಮೊದಲು ಇದರ ಮೂಲವನ್ನು ಪತ್ತೆಮಾಡಿ ಎಂದು ಗ್ರಾಹಕರಿಗೆ ಸಲಹೆ ನೀಡಿದೆ.
ಗ್ರಾಹಕರು ಸ್ವೀಕರಿಸುವ ಸಂದೇಶ ಬ್ಯಾಂಕ್ನದ್ದಾದರೆ ಅದು ಯಾವ ರೀತಿಯಲ್ಲಿರಲಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ನೀಡಿದ್ದು ಇದರಿಂದ ಮೋಸದ ಸಂದೇಶದಿಂದ ಗ್ರಾಹಕರು ತಮ್ಮನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದೆ. ಅದೂ ಅಲ್ಲದೆ ಕೆಲವೊಂದು ಸಲಹೆಗಳನ್ನು ಗ್ರಾಹಕರಿಗೆ ನೀಡಿದೆ
• ನಿಮ್ಮ ಬ್ರೌಸರ್ನ ಅಡ್ರೆಸ್ ಬಾರ್ನಲ್ಲಿರುವ ಯುಆರ್ಎಲ್ ಅನ್ನು ಮಾತ್ರವೇ ಟೈಪ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ವೆಬ್ಸೈಟ್ ಪ್ರವೇಶಿಸಿ
• ಆನ್ಲೈನ್ ಬ್ಯಾಂಕಿಂಗ್ ಅನ್ನು ಒದಗಿಸುವ ಯಾವುದೇ ದೋಷಪೂರಿತ ಅಪ್ಲಿಕೇಶನ್ಗಳನ್ನು ಅಪ್ಲಿಕೇಶನ್ ಸ್ಟೋರ್ಗಳಿಂದ ಡೌನ್ಲೋಡ್ ಮಾಡದಿರಿ
• ಸೈಟ್ ಪ್ರವೇಶಿಸುವ ಯಾವುದೇ ಲಿಂಕ್ ಅಥವಾ ಇಮೇಲ್ ಸಂದೇಶವನ್ನು ಕ್ಲಿಕ್ ಮಾಡದಿರಿ. ಎಸ್ಬಿಐ ಅಥವಾ ಅದರ ಪ್ರತಿನಿಧಿಗಳು ನಿಮಗೆ ಇಮೇಲ್, ಎಸ್ಎಮ್ಎಸ್ ಅಥವಾ ಫೋನ್ ಕರೆಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ ಅಂತೆಯೇ ಪಾಸ್ವರ್ಡ್ ಅಥವಾ ಒಟಿಪಿ ವಿವರ ಕೇಳುವುದಿಲ್ಲ. ಬ್ಯಾಂಕ್ನಿಂದ ನಿಮ್ಮ ಹಣವನ್ನು ಲಪಟಾಯಿಸಲು ಇಂತಹ ಇಮೇಲ್, ಎಸ್ಎಮ್ಎಸ್ ಕಾರಣವಾಗಿರುತ್ತದೆ.
• ಇಂತಹ ಫೋನ್ ಕರೆ, ಇಮೇಲ್ಗಳಿಗೆ ಸ್ಪಂದಿಸದಿರಿ. ಕೂಡಲೇ ಬ್ಯಾಂಕ್ ಗಮನಕ್ಕೆ ತನ್ನಿ
• ನಿಮ್ಮ ಬ್ಯಾಂಕ್ ದಾಖಲೆಗಳನ್ನು ನೀವು ಬಹಿರಂಗಪಡಿಸಿದ್ದಲ್ಲಿ ನಿಮ್ಮ ಬಳಕೆದಾರ ಪ್ರವೇಶವನ್ನು ತುರ್ತಾಗಿ ಲಾಕ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ