ಫೋನ್ ಇಲ್ಲದಿದ್ರೂ ವಾಟ್ಸಪ್ ಮೆಸೇಜ್ ಕಳಿಸಬಹುದು, ಹೇಗೆ ? ಇಲ್ಲಿದೆ ಫುಲ್ ಡೀಟೆಲ್ಸ್

ಶುಕ್ರವಾರ, 16 ಜುಲೈ 2021 (10:24 IST)
Whatsapp New Feature : ವಾಟ್ಸಾಪ್ನ ಹೊಸ ಅಪ್ಡೇಟ್ ನಿಮ್ಮ ಫೋನ್ನ ಬ್ಯಾಟರಿ ಡ್ರೈ ಆದಾಗ, ಇಲ್ಲವೇ ಇಂಟರ್ನೆಟ್ನಿಂದ ಸಂಪರ್ಕ ಕಡಿತಗೊಂಡಾಗ ಕೂಡ ಸಂಪರ್ಕದಲ್ಲಿರಲು ಅನುಕೂಲಕರವಾಗಿದೆ. ವಾಟ್ಸಾಪ್ ತನ್ನ ಮಲ್ಟಿ-ಡಿವೈಸ್ ಸಾಮರ್ಥ್ಯವನ್ನು ಬೀಟಾ ಟೆಸ್ಟರ್ಗಳಿಗೆ ಲಭ್ಯವಾಗಿಸಿದೆ. ಮಲ್ಟಿ-ಡಿವೈಸ್ ಬೆಂಬಲವು ಎಂಡ್ ಟು ಎಂಡ್ ಎನ್ಕ್ರಿಪ್ಶನ್ನೊಂದಿಗೆ ಬಂದಿದೆ.

ಹೊಸ ಅಪ್ಡೇಟ್ ಆರಂಭದಲ್ಲಿ “ಸಣ್ಣ ಗುಂಪಿ”ಗೆ ಮಾತ್ರವೇ ಸೀಮಿತವಾಗಿದೆ ಎಂದು ವಾಟ್ಸಾಪ್ ತಿಳಿಸಿದೆ. ಅಂತು ಇಂತು ವಾಟ್ಸಾಪ್ ಬಹುನಿರೀಕ್ಷೆಯ ಮಲ್ಟಿ-ಡಿವೈಸ್ ಸಾಮರ್ಥ್ಯವುಳ್ಳ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದ್ದು ಇನ್ನು ಬಳಕೆದಾರರು ವಾಟ್ಸಾಪ್ ಅನ್ನು ತಮ್ಮ ಫೋನ್ಗಳಲ್ಲಿ ಮಾತ್ರವಲ್ಲದೆ ನಾಲ್ಕು ವಿಭಿನ್ನ ಸಾಧನಗಳಲ್ಲಿ ಒಮ್ಮೆಲೆ ವಾಟ್ಸಾಪ್ ಖಾತೆಯನ್ನು ನಿರ್ವಹಿಸಬಹುದಾಗಿದೆ. ನಾಲ್ಕು ವಿವಿಧ ಡಿವೈಸ್ಗಳೊಂದಿಗೆ ವಾಟ್ಸಾಪ್ ಖಾತೆ ಲಿಂಕ್ ಆಗಿದ್ದರೂ ಬಳಕೆದಾರರ ಪ್ರೈವೆಸಿಗೆ ಇದರಿಂದ ಯಾವುದೇ ಧಕ್ಕೆಯುಂಟಾಗುವುದಿಲ್ಲ ಏಕೆಂದರೆ ವಾಟ್ಸಾಪ್ ಈ ವೈಶಿಷ್ಟ್ಯವನ್ನು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಜೊತೆಗೆ ಪ್ರಸ್ತುತಪಡಿಸುತ್ತಿದೆ.
ಸ್ಮಾರ್ಟ್ಫೋನ್ ಸಕ್ರಿಯಗೊಳ್ಳದಿದ್ದರೂ ವಾಟ್ಸಾಪ್ ಬಳಸಬಹುದು
ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವೇನೆಂದರೆ ನಿಮ್ಮ ಫೋನ್ ಸಕ್ರಿಯವಾಗಿಲ್ಲದೇ ಇದ್ದರೂ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ನಿಮ್ಮ ಡೆಸ್ಕ್ಟಾಪ್ ಮೇಲೆ ವಾಟ್ಸಾಪ್ ಚಾಟಿಂಗ್ ನಡೆಸಬಹುದು. ಆದರೆ ಬೇರೆ ಡಿವೈಸ್ನಲ್ಲಿ ವಾಟ್ಸಾಪ್ ನಿರ್ವಹಿಸಲು ಇಂಟರ್ನೆಟ್ ಬೇಕಾಗುತ್ತದೆ. ಪ್ರಸ್ತುತ ಈ ಆವೃತ್ತಿ ಬೀಟಾ ವರ್ಶನ್ಗಾಗಿ ಮಾತ್ರವೇ ಬಿಡುಗಡೆಯಾಗಿದೆ.
ನಿಮ್ಮ ಫೋನ್ನ ಬ್ಯಾಟರಿ ಡೆಡ್ ಆಗಿದ್ದರೂ ಮಲ್ಟಿ-ಡಿವೈಸ್ ಸಾಮರ್ಥ್ಯವನ್ನು ಬಳಸಿಕೊಂಡು ನಿಮ್ಮ ವಾಟ್ಸಾಪ್ ಖಾತೆಯನ್ನು ಲ್ಯಾಪ್ಟಾಪ್ನಲ್ಲಿ ನಿರ್ವಹಿಸಬಹುದಾಗಿದೆ. ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೇ ನಿಮ್ಮ ಡೆಸ್ಕ್ಟಾಪ್ನಲ್ಲಿ ಉತ್ತಮ ಇಂಟರ್ನೆಟ್ ಇದ್ದರೆ ಅಲ್ಲಿ ಕೂಡ ವಾಟ್ಸಾಪ್ ಕಾರ್ಯನಿರ್ವಹಿಸುತ್ತದೆ.
ವಾಟ್ಸಾಪ್ ಮಲ್ಟಿ-ಡಿವೈಸ್ ಸಾಮರ್ಥ್ಯದ ಮೇಲೆ ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡುತ್ತಿದೆ. ಎಂಡ್ – ಎಂಡ್ ಎನ್ಕ್ರಿಪ್ಶನ್ ಅನ್ನು ನಿರ್ವಹಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ನಿಮ್ಮ ಡೇಟಾಗಳನ್ನು ಅಂದರೆ ಮೆಸೇಜ್ ಹಿಸ್ಟ್ರಿ, ಕಾಂಟ್ಯಾಕ್ಟ್ ನೇಮ್ಸ್, ಸ್ಟಾರ್ ಮಾಡಿದ ಮೆಸೇಜ್ಗಳನ್ನು ಕಾಪಾಡಿಕೊಳ್ಳಲು ಅನುವು ಮಾಡಿದೆ.
ವಾಟ್ಸಾಪ್ ಮಲ್ಟಿ-ಡಿವೈಸ್ ಕ್ಲೈಂಟ್-ಫ್ಯಾನ್ ಔಟ್ ವಿಧಾನವನ್ನು ಬಳಸುತ್ತದೆ, ವಾಟ್ಸಾಪ್ ಕ್ಲೈಂಟ್ ಕಳುಹಿಸುವ ಸಂದೇಶವನ್ನು ಎನ್ಕ್ರಿಪ್ಟ್ ಮಾಡುತ್ತದೆ ಹಾಗೂ ಅದನ್ನು ಬೇರೆ ಬೇರೆ ಸಾದನಗಳಿಗೆ ಅಂದರೆ ಸಾಧನ ಪಟ್ಟಿಗಳಲ್ಲಿರುವ ಸ್ವೀಕರಿಸುವವರ ಕಳುಹಿಸುವವರಿಗೆ ರವಾನಿಸುತ್ತದೆ. ಎಂದು ಸಂಸ್ಥೆಯು ವಿವರವಾದ ಪೋಸ್ಟ್ನಲ್ಲಿ ವಿವರಿಸಿದೆ . “ಪ್ರತಿ ಸಾಧನದೊಂದಿಗೆ ಸ್ಥಾಪಿತ ಜೋಡಿಯಾಗಿ ಎನ್ಕ್ರಿಪ್ಶನ್ ಸೆಷನ್ ಬಳಸಿ ಪ್ರತಿಯೊಂದು ಸಂದೇಶವನ್ನು ಪ್ರತ್ಯೇಕವಾಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಸಂದೇಶಗಳನ್ನು ತಲುಪಿಸಿದ ನಂತರ ಅವುಗಳನ್ನು ಸರ್ವರ್ನಲ್ಲಿ ಸಂಗ್ರಹಿಸಲಾಗುವುದಿಲ್ಲ.” ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸಂಪರ್ಕ ಹೆಸರುಗಳು ಮತ್ತು ಚಾಟ್ ಆರ್ಕೈವ್ ಮಾಡಲಾಗಿದೆಯೆ ಅಥವಾ ಸಾಧನಗಳಲ್ಲಿ ಸಂದೇಶಕ್ಕೆ ಸ್ಟಾರ್ ಹಾಕಲಾಗಿದೆಯೆ ಎಂದು ಸಂದೇಶ ಇತಿಹಾಸ ಮತ್ತು ಅಪ್ಲಿಕೇಶನ್ ಸ್ಥಿತಿಯ ಡೇಟಾದಂತಹ ಡೇಟಾವನ್ನು ಇದು ಸಿಂಕ್ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ. ಸಾಧನಗಳ ನಡುವೆ ಸಿಂಕ್ ಮಾಡಲಾದ ಡೇಟಾವನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ