ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ!

ಸೋಮವಾರ, 17 ಜನವರಿ 2022 (09:37 IST)
ಜಗತ್ತು ಡೆಲ್ಟಾ ಹಾಗೂ ಒಮಿಕ್ರೋನ್ ಕೋವಿಡ್ ತಳಿಗಳ ಹಾವಳಿಯಿಂದ ತತ್ತರಿಸುತ್ತಿರುವಾಗಲೇ ಕೊರೋನಾ ವೈರಸ್ನ ಮತ್ತೊಂದು ರೂಪಾಂತರಿ ತಳಿ ‘ಡೆಲ್ಟಾಕ್ರೋನ್’ ಪತ್ತೆಯಾಗಿದೆ.

ಯುರೋಪ್  ಖಂಡದ ದ್ವೀಪ ದೇಶ ಸೈಪ್ರಸ್ ವಿಜ್ಞಾನಿಗಳು ಈ ಹೊಸ ತಳಿ ಪತ್ತೆ ಹಚ್ಚಿದ್ದಾರೆ. ಈ ವೈರಸ್ನಲ್ಲಿ ಡೆಲ್ಟಾಮತ್ತು ಒಮಿಕ್ರೋನ್ ಎರಡೂ ತಳಿಗಳ ಕೆಲ ಗುಣಗಳಿವೆ. ಸೈಪ್ರಸ್ನಲ್ಲಿ ಕೋವಿಡ್ ದೃಢಪಟ್ಟ 25 ರೋಗಿಗಳ ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಿದಾಗ ಅವರ ಪೈಕಿ ಕೆಲವರಲ್ಲಿ ಡೆಲ್ಟಾಮತ್ತು ಒಮಿಕ್ರೋನ್ ರೂಪಾಂತರಿ ತಳಿಗಳ ಒಂದಷ್ಟು ಗುಣಗಳ ಮಿಶ್ರಣವಿರುವ ವೈರಸ್ ಪತ್ತೆಯಾಗಿದೆ.

ಇದಕ್ಕೆ ‘ಡೆಲ್ಟಾಕ್ರೋನ್’ ಎಂದು ವಿಜ್ಞಾನಿಗಳು ಕರೆದಿದ್ದಾರಾದರೂ, ಅಧಿಕೃತವಾಗಿ ಇನ್ನೂ ಹೆಸರು ಇಟ್ಟಿಲ್ಲ. ಇನ್ನು, ತಕ್ಷಣಕ್ಕೆ ಈ ರೂಪಾಂತರಿ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಕುರಿತು ಅಧ್ಯಯನ ನಡೆಸಿದ ಸೈಪ್ರಸ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.

ಹೊಸ ರೂಪಾಂತರಿ ತಳಿಯಲ್ಲಿ ಡೆಲ್ಟಾ ತಳಿಯ ಕೆಲ ಜೆನೆಟಿಕ್ ಗುಣಗಳು ಹಾಗೂ ಒಮಿಕ್ರೋನ್ ತಳಿಯ ಕೆಲ ಜೆನೆಟಿಕ್ ಗುಣಗಳು ಮಿಶ್ರಿತವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ’ ಎಂದು ಸೈಪ್ರಸ್ನ ಆರೋಗ್ಯ ಸಚಿವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ