ಯಾವ ಪಕ್ಷ ಅಧಿಕಾರಕ್ಕೆ ಬಂದ್ರೂ ನಾವು ವಿಪಕ್ಷ: ಪ್ರಕಾಶ ರೈ

ಮಂಗಳವಾರ, 24 ಏಪ್ರಿಲ್ 2018 (13:05 IST)
ಪ್ರಕಾಶ್ ರೈ ಬಂದಾಗ್ಲೇ ಬದಲಾವಣೆ ಆಗುತ್ತೆ‌ ಅಂದ್ಕೊಳ್ಳಬೇಡಿ. ಈ ಹಿಂದೆ ಇಂತಹ ಹಲವು ನಾಯಕರು ಬಂದಿದ್ದಾರೆ.
ನಾಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ನಾನು ಪ್ರಶ್ನಿಸುವೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಗುಡುಗಿದ್ದಾರೆ
ರಾಜಕೀಯಕ್ಕೆ ಧುಮುಕೋದು ನಮ್ಮ ಉದ್ದೇಶವಲ್ಲ. ನಾಳೆ ನಾನು ರಾಜಕೀಯಕ್ಕೆ ಇಳಿದ್ರೂ ಜಸ್ಟ್ ಆಸ್ಕಿಂಗ್ ಅಭಿಯಾನದಿಂದ ನನ್ನನ್ನು ಹೊರಗೆ ಇಡಬಹುದು.ಯಾವ ಪಕ್ಷ ಅಧಿಕಾರಕ್ಕೆ ಬಂದ್ರೂ ನಾವು ವಿಪಕ್ಷವಾಗಿರುವೆವು ಎಂದು ಬಹುಭಾಷ ನಟ ಪ್ರಕಾಶ ರೈ ಹೇಳಿದ್ದಾರೆ. 
 
ಗಾಂಧಿ, ಅಂಬೇಡ್ಕರ್, ಪೆರಿಯಾರ್ ರಾಜಕೀಯಕ್ಕೆ ಬಂದೋರಲ್ಲ.ಆದರೂ ಸಮಾಜದಲ್ಲಿ ಬದಲಾವಣೆ ಮಾಡಿದ್ದಾರೆ.
ಬಿಜೆಪಿಯವರಿಗೆ ಶಾಂತಿಯುತವಾಗಿ ಚುನಾವಣೆ ನಡೆಸಿ ಅಭ್ಯಾಸವಿಲ್ಲ.ಮೇ 12 ರೊಳಗೆ ಯಾವುದಾದರೂ ಗಲಭೆ ಆಗಬಹುದು.
ಯಾಕೆಂದರೆ ಇದು ಅಮಿತ್ ಶಾ ಅವರ ರಾಜಕೀಯ ಎಂದು ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ