ಫೇಸ್ ಬುಕ್ ನಲ್ಲಿ ನಿಮ್ಮ ಪೋಸ್ಟ್ ಗೆ ಅಪರಿಚಿತರು ಕಾಮೆಂಟ್, ಲೈಕ್ ಮಾಡಿದ್ದರೆ ಎಚ್ಚರವಾಗಿರಿ!
ಭಾನುವಾರ, 23 ಸೆಪ್ಟಂಬರ್ 2018 (10:02 IST)
ನವದೆಹಲಿ: ಫೇಸ್ ಬುಕ್ ನಲ್ಲಿ ನಾವು ಪ್ರಕಟಿಸುವ ಫೋಟೋ, ಇನ್ಯಾವುದೇ ಪೋಸ್ಟ್ ಗಳಿಗೆ ಅಪರಿಚಿತ ಖಾತೆದಾರರು ಲೈಕ್, ಕಾಮೆಂಟ್ ಕೊಟ್ಟರೆ ಇನ್ನು ಮುಂದೆ ಹುಷಾರಾಗಿರಿ!
ಇದು ಸಾಮಾನ್ಯ ಜನರು ಮತ್ತು ಸೈನಿಕರನ್ನು ಹನಿ ಟ್ರ್ಯಾಪ್ ಗೆ ಬೀಳಿಸುವ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ ಐಯ ಹೊಸ ಮಾಸ್ಟರ್ ಪ್ಲ್ಯಾನ್! ಬಿಎಸ್ಎಫ್ ಜವಾನ ಅಚ್ಯುತಾನಂದ ಮಿಶ್ರಾ ಎಂಬ ಯೋಧ ಹನಿಟ್ರ್ಯಾಪ್ ಗೆ ಒಳಗಾದ ಬಗೆಯನ್ನು ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ವಿಚಾರ ಗೊತ್ತಾಗಿದೆ.
ಈ ಯೋಧನ ಫೋಟೋವನ್ನು ಅಪರಿಚಿತ ಮಹಿಳಾ ಖಾತೆದಾರರು ಲೈಕ್ ಮಾಡಿ ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಳಂತೆ. ಬಳಿಕ ಈ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ಮಾಡುತ್ತದಂತೆ ಐಎಸ್ಐ. ಹಾಗಾಗಿ ಅಪರಿಚಿತ ಖಾತೆದಾರರ ಕಾಮೆಂಟ್, ಲೈಕ್ ಗಳಿಗೆ ಪ್ರತಿಕ್ರಿಯಿಸಲು ಹೋಗಬೇಡಿ ಎಂದು ತನಿಖಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.