ಆಂಟಿ ಬಯೋಟಿಕ್ ಔಷಧಿಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಈ ಶಾಕಿಂಗ್ ಸುದ್ದಿ ಓದಿ!

ಗುರುವಾರ, 30 ಆಗಸ್ಟ್ 2018 (08:58 IST)
ನವದೆಹಲಿ: ಆಂಟಿಬಯೋಟಿಕೆ ಔಷಧಗಳು ಇನ್ನು ಉಪಯೋಗವಿಲ್ಲ ಎಂದು ಸಿಕ್ಕ ಸಿಕ್ಕಲ್ಲಿ ಎಸೆಯುತ್ತಿದ್ದೀರಾ? ಹಾಗಿದ್ದರೆ ಈ ಶಾಕಿಂಗ್ ಸುದ್ದಿಯನ್ನು ನೀವು ಓದಲೇಬೇಕು.

ದೆಹಲಿಯ ಏಮ್ಸ್ ವೈದ್ಯರ ಸಂಶೋಧನಾ ಸಮಿತಿಯೊಂದು ಈ ಬಿಸಾಕಿದ ಔಷಧಗಳ ಬಗ್ಗೆ ಆಘಾತಕಾರಿ ಅಂಶ ಕಂಡುಕೊಂಡಿದೆ. ಇಂತಹ ಹಲವು ಆಂಟಿಬಯೋಟಿಕ್ ಔಷ‍ಧಗಳು ಯುಮುನಾ ನದಿಯಲ್ಲಿ ತೇಲಿಬರುತ್ತಿದ್ದು, ಇದನ್ನೇ ತರಕಾರಿ, ಹಣ್ಣು ಬೆಳೆಗೆ ಬಳಸಲಾಗುತ್ತಿದೆ. ಇದು ಆಹಾರದ ರೂಪದಲ್ಲಿ ವಿಷಕಾರಿಯಾಗಿ ಮತ್ತೆ ನಮ್ಮ ಹೊಟ್ಟೆ ಸೇರುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಕೇವಲ ಯಮುನಾ ನದಿ ನೀರು ಮಾತ್ರವಲ್ಲ, ಬೇರೆ ಬೇರೆ ಕಡೆಯಿಂದ ನೀರಿನ ಸ್ಯಾಂಪಲ್ ಗಳನ್ನು ಪರೀಕ್ಷಿಸಿದ ವೈದ್ಯರ ತಂಡ ಈ ಅಭಿಪ್ರಾಯಕ್ಕೆ ಬಂದಿದೆ. ಕಸ ವಿಲೇವಾರಿ ಸಂದರ್ಭದಲ್ಲಿ ನಡೆಯುವ ಬೆಜವಾಬ್ಧಾರಿಯಿಂದ ಇಂತಹ ಔಷಧಗಳು ನೀರಿಗೆ ಸೇರಿ ವಿಷಕಾರಿಯಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ