ಅಮಿತ್ ಶಾರನ್ನು ಮೊಹಮ್ಮದ್ ಅಲಿ ಜಿನ್ನಾಗೆ ಹೋಲಿಸಿದವರು ಯಾರು ಗೊತ್ತೇ?
ತಮ್ಮ ಹೊಸ ಪುಸ್ತಕವೊಂದರಲ್ಲಿ ಗುಹಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಜಿನ್ನಾಗೆ ಹೋಲಿಸಿದ್ದಾರೆ. ಜಿನ್ನಾ ತಮ್ಮದೇ ಮೂಗಿನ ನೇರಕ್ಕೆ ನಿರ್ಧಾರ ತೆಗೆದುಕೊಂಡವರು. ಪಾಕಿಸ್ತಾನ ನಿರ್ಮಾಣ ವಿಚಾರದಲ್ಲಿ ತಮ್ಮದೇ ಇಷ್ಟ ಪ್ರಕಾರ ನಡೆದುಕೊಂಡವರು. ಅದೇ ರೀತಿ ಶಾ ಕೂಡಾ ತಮಗೆ ತೋಚಿದಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಕರುಣಾಮಯಿ ಅಲ್ಲ ಎಂದಿದ್ದಾರೆ.
ಜಿನ್ನಾ ಏನೇ ಆದರೂ ಪಾಕಿಸ್ತಾನ ನಮ್ಮದೇ ಎನ್ನುತ್ತಿದ್ದರು. ಅದೇ ರೀತಿ ಶಾ ಕೂಡಾ ಏನೇ ಆದರೂ ಚುನಾವಣೆಯಲ್ಲಿ ಗೆಲುವು ನಮ್ಮದೇ ಎನ್ನುತ್ತಿರುತ್ತಾರೆ. ಹಾಗಾಗಿ ಇವರಿಬ್ಬರಿಗೆ ಹೋಲಿಕೆ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.