ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ 2021-22ನೇ ಸಾಲಿನ ಮಾದರಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. 10 ಹಾಗೂ 12 ನೇ ತರಗತಿಯ ಮಾದರಿ ಪತ್ರಿಕೆಗಳು ಸಿಬಿಎಸ್ಇ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಬೋರ್ಡ್ ಹೇಳಿದೆ.
2022ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯಲ್ಲಿ ಹಾಜರಾಗಲಿರುವ ವಿದ್ಯಾರ್ಥಿಗಳು ಬೋರ್ಡ್ ಪಠ್ಯಕ್ರಮವನ್ನು ಟರ್ಮ್ 1 ಹಾಗೂ ಟರ್ಮ್ 2 ಎಂದು ಸಮನಾಗಿ ವಿಂಗಡಿಸಿದೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಕೋವಿಡ್ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್ ಈ ನಿರ್ಧಾರ ಕೈಗೊಂಡಿದೆ.
http://www.cbseacademic.nic.in/SQP_CLASSX_2021-22.html
http://cbseacademic.nic.in/SQP_CLASSXII_2021-22.html ಗೆ ತೆರಳಿ ವಿದ್ಯಾರ್ಥಿಗಳು ಮಾದರಿ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳಿಗೆ ಮೊದಲ ಟರ್ಮ್ ಪರೀಕ್ಷೆಯು ಬಹು ಆಯ್ಕೆ ಮಾದರಿಯಲ್ಲಿ ನಡೆಯಲಿದೆ. ಅದರಂತೆ 2ನೇ ಟರ್ಮ್ ಪರೀಕ್ಷೆಯನ್ನು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ನೀಡಿಯೇ ಮಾಡಬೇಕೇ ಅಥವಾ ಬೇಡವೇ ಅನ್ನೋದನ್ನು 2022ರಲ್ಲಿ ಕೊರೊನಾ ಪರಿಸ್ಥಿತಿಯನ್ನು ಗಮನಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಬಿಎಸ್ಇ ಬೋರ್ಡ್ ಹೇಳಿದೆ.