ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್

ಮಂಗಳವಾರ, 4 ಏಪ್ರಿಲ್ 2023 (09:54 IST)
ನವದೆಹಲಿ : ಡಿಜಿಟಲ್ ಬ್ಯಾಂಕಿಂಗ್ ಯಾವಾಗಿನಿಂದ ಹೆಚ್ಚಳವಾಯಿತೋ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು, ಅವರು ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ. ಇಂತಹ ವಂಚನೆಗೆ ಪ್ರಮುಖ ಬ್ಯಾಂಕ್ಗಳ ಗ್ರಾಹಕರೇ ಒಳಗಾಗಿದ್ದಾರೆ.
 
ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು ಹೆಚ್ಚಾಗಿ ವರದಿಯಾಗಿದೆ. ಇದೀಗ ಭಾರತ ಸರ್ಕಾರ ಭಾರತೀಯ ಬಳಕೆದಾರರಿಗೆ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್ನಲ್ಲಿ ಕಳುಹಿಸಲಾಗುತ್ತಿದೆ.

ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ವಾಟ್ಸಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ರೀಚಾರ್ಜ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಅನ್ನು ಪಡೆಯಬಹುದು ಎಂದು ನಕಲಿ ಸಂದೇಶದಲ್ಲಿ ತಿಳಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ