ಅಧಿಕಾರಿಗಳು ಇನ್ಮುಂದೆ ವಾಟ್ಸಪ್ ಡಿಪಿಗೆ ಅವರ ಫೋಟೋ ಹಾಕಿಕೊಳ್ಳುವಂತಿಲ್ಲ!

ಗುರುವಾರ, 23 ಫೆಬ್ರವರಿ 2023 (09:31 IST)
ಬೆಂಗಳೂರು : ಪೊಲೀಸ್ ಅಧಿಕಾರಿಗಳು ಇನ್ಮುಂದೆ ವಾಟ್ಸಪ್ ಡಿಪಿಗೆ ಅವರ ಫೋಟೋ ಹಾಕಿಕೊಳ್ಳುವಂತಿಲ್ಲ ಎಂದು ಬೆಂಗಳೂರಿನ ಆಗ್ನೇಯ ವಿಭಾಗದಲ್ಲಿ ಹೊಸ ನಿಯಮ ಜಾರಿಯಾಗಿದೆ.

ಸಿಂಗಂ ರೀತಿ ವಾಟ್ಸಪ್ ಡಿಪಿಗಳಲ್ಲಿ ಪೊಲೀಸ್ ಅಧಿಕಾರಿಗಳು ಡಿಪಿ ಹಾಕಿಕೊಳ್ಳುತ್ತಾರೆ. ಆದರೆ ಸಾರ್ವಜನಿಕರ ಫೋನ್ ರಿಸಿವ್ ಮಾಡಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾರಿಂದ ಹೊಸ ಆದೇಶ ಮಾಡಲಾಗಿದೆ.

ಇಂದಿನಿಂದ ಪೊಲೀಸ್ ಅಧಿಕಾರಿಗಳು ಸರ್ಕಾರಿ ನಂಬರ್ಗಳಿಗೆ ತಮ್ಮ ಪೋಟೋ ಡಿಪಿ ಹಾಕಿಕೊಳ್ಳಬಾರದು. ಬದಲಾಗಿ ಲೋಕಸ್ಪಂದನ ಅನ್ನೋ ಕ್ಯೂ ಆರ್ ಕೋಡ್ ಹಾಕಿಕೊಳ್ಳಬೇಕು.

ಒಂದು ವೇಳೆ ಅಧಿಕಾರಿ ಪೋನ್ ರಿಸಿವ್ ಮಾಡಿಲ್ಲ, ದೂರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂದರೆ, ಅಧಿಕಾರಿಯ ಡಿಪಿಯಲ್ಲಿರುವ ಲೋಕಸ್ಪಂದನ ಕ್ಯೂ ಆರ್ ಕೊಡ್ಗೆ ಸ್ಕ್ಯಾನ್ ಮಾಡಿ ದೂರು ನೀಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ