ಗ್ರಾಹಕರ ಜೇಬು ಸುಡ್ತಿದೆ ಬೆಲೆ ಏರಿಕೆ !

ಶುಕ್ರವಾರ, 27 ಜನವರಿ 2023 (08:36 IST)
ಬೆಂಗಳೂರು : ಮೊಟ್ಟೆ ಬೆಲೆ ಏರಿಕೆಯತ್ತ ಮುಖಮಾಡಿದ್ದು, ರಿಟೇಲ್ ಶಾಪ್ನಲ್ಲಿ ಒಂದು ಮೊಟ್ಟೆಗೆ 7 ರೂಪಾಯಿಗೆ ತಲುಪಿದೆ.

ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗತ್ತಿರೋದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ.

2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್ಗೆ ಹೋಲ್ ಸೇಲ್ ರೂಪದಲ್ಲಿ ಬರೋಬ್ಬರಿ 575 ರೂಪಾಯಿ ಆಗಿದೆ.

ಬೆಲೆ ಏರಿಕೆ ಆಗಿರುವುದರಿಂದ ಅತ್ತ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಈ ಮೊಟ್ಟೆ ಬೆಲೆ ಏರಿಕೆಗೆ ಕಾರಣಗಳೇನಂದ್ರೆ ಕೋಳಿಗಳಿಗೆ ನೀಡೋ ಆಹಾರ ದುಬಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ