ತರಕಾರಿ ಬೆಲೆ ಏರಿಕೆ

ಬುಧವಾರ, 14 ಡಿಸೆಂಬರ್ 2022 (17:25 IST)
ರಾಜ್ಯದಲ್ಲಿ 4-5 ದಿನಗಳಿ ಶೀತ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ದಿನವಿಡಿ ಮಳೆಯಾಗ್ತಿದೆ. ಒಂದ್ಕಡೆ ವಿಪರೀತ ಚಳಿ, ಇನ್ನೊಂದ್ಕಡೆ ಸೈಕ್ಲೋನ್ ಎಫೆಕ್ಟ್ನಿಂದ ಮಳೆ ಎಡೆಬಿಡದೆ ಸುರೀತಿದೆ. ಇದ್ರಿಂದ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಇದ್ದಕ್ಕಿದ್ದಂತೆ ತರಕಾರಿ ಬೆಲೆ ಏರಿಕೆಯಾಗಿದ್ದು, ಬೆಂಗಳೂರಲ್ಲಿ ಎಲ್ಲಾ ತರಕಾರಿಗಳ ಬೆಲೆಯೂ 20 ರಿಂದ 25ರಷ್ಟು ಏರಿಕೆ ಆಗಿದೆ. ಕೆ.ಆರ್. ಮಾರ್ಕೆಟ್, ಯಶವಂತಪುರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಮಳೆಯಿಂದ ತರಕಾರಿ ಪೂರೈಕೆ ಕೂಡ ಆಗ್ತಿಲ್ಲ. ಕ್ಯಾರೆಟ್, ಮೂಲಂಗಿ, ಬೀನ್ಸ್ ಬೆಲೆ ಗಗನಕ್ಕೇರಿದೆ.. ಹಾಗೇ ಕ್ಯಾಪ್ಸಿಕಂ, ಬೆಂಡೆಕಾಯಿ,ಸೌತೆಕಾಯಿ,ಬದನೆಕಾಯಿ ಬೆಲೆಯಲ್ಲೂ ಏರಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ