ಮತ್ತೆ ಅಡುಗೆ ಎಣ್ಣೆ ದರ ಇಳಿಕೆ! ಎಷ್ಟು ರೂ ಇಳಿಕೆ?
ಅಡುಗೆ ಎಣ್ಣೆಯ ಬೆಲೆಯನ್ನು 10-12 ರೂ. ವರೆಗೆ ಕಡಿತಗೊಳಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಹೌದು, ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ಅಡುಗೆ ಎಣ್ಣೆ ತಯಾರಕ ಕಂಪನಿಗಳು ಜಾಗತಿಕ ಬೆಲೆಗಳೊಂದಿಗೆ ಸರಿದೂಗಿಸಿ, ಸಾಮಾನ್ಯ ಜನರು ಬಳಸುವ ಅಡುಗೆ ಎಣ್ಣೆಯ ದರವನ್ನು ಕಡಿತಗೊಳಿಸಲು ಒಪ್ಪಿಕೊಂಡಿವೆ.
ಇತ್ತೀಚಿನ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಯನ್ನು ಸಮತೋಲನಕ್ಕೆ ತರುವಲ್ಲಿ ಸಹಾಯ ಮಾಡಲು ತನ್ನ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ.