ಶುಕ್ರವಾರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು, ಅಲ್ಲದೇ ರಾಜಕೀಯ ಪಕ್ಷಗಳ ಬೆಳವಣಿಗೆಗಳು ಏನೇನಿವೆ ಎಂಬುದನ್ನು ಇಲ್ಲಿ ಪರಿಶೀಲಿಸಿ.
ಕರ್ನಾಟಕ ತೋಟಗಾರಿಕೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಆಯೋಜಿಸಿರುವ '75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಶೇಷ-ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ, ಸ್ಥಳ: ಗಾಜಿನ ಮನೆ ಲಾಲ್ ಬಾಗ್, ಬೆಂಗಳೂರು.
ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿರುವ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರು.
ಮಧ್ಯಾಹ್ನ 12: 'ಹರ್ ಘರ್ ತಿರಂಗಾ' ವಿಡಿಯೋ ಸಂವಾದ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 01: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 2.15: ವೇದಾಂತ ರಿಸೋರ್ಸ್ ಲಿಮಿಟೆಟ್ ಸಂಸ್ಥಾಪಕ ಅಧ್ಯಕ್ಷ ಅನಿಲ್ ಅಗರವಾಲ್ ಜತೆ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 3.30: ಯೋಜನಾ ಇಲಾಖೆ ವತಿಯಿಂದ ರಾಜ್ಯಮಟ್ಟದ ಪ್ರಥಮ 'ದಿಶಾ' ಸಮಿತಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 04.30: ಸ್ವಾತಂತ್ರ್ಯ ದಿನಾಚರಣೆ -2022 ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.