ಕೊರೊನಾ ಆತಂಕ: ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು!

ಮಂಗಳವಾರ, 16 ನವೆಂಬರ್ 2021 (08:47 IST)
ಬೆಂಗಳೂರು : ಕೊರೊನಾ ಆತಂಕದಿಂದಾಗಿ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಪಿಯು ಬೋರ್ಡ್ ಮುಂದಾಗಿದೆ.
ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನುಮುಖ್ಯ ಪರೀಕ್ಷಾ ಮಾದರಿಯಲ್ಲಿ ನಡೆಸಲು ಪಿಯು ಬೋರ್ಡ್ ನಿರ್ಧರಿಸಿದೆ. ಸಿಬಿಎಸ್ಸಿ, ಐಸಿಎಸ್ಇ ಮಾದರಿಯಲ್ಲಿ ಪರೀಕ್ಷೆಗೆ ಮುಂದಾಗಿದ್ದು, ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಆಯೋಜಿಸಲಾಗಿದೆ. ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನಕ್ಕೂ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ.
ಈ ಮೊದಲು ಮಧ್ಯವಾರ್ಷಿಕ ಪರೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿ ಆಗುತ್ತಿತ್ತು. ಮೌಲ್ಯಮಾಪನ ಆಯಾ ಕಾಲೇಜು ಮಟ್ಟದಲ್ಲಿ ನಡೆಯುತ್ತಿತ್ತು. ಇನ್ನು ಪರೀಕ್ಷಾ ದಿನಾಂಕವೂ ಕೂಡ ಹಿಂದೆಮುಂದೆ ಆಗುತ್ತಿತ್ತು. ಆದರೀಗ ಕೊರೊನಾ 3ನೇ ಅಲೆ ಹಿನ್ನೆಲೆ, ಮಧ್ಯವಾರ್ಷಿಕ ಪರೀಕ್ಷೆ ವಾರ್ಷಿಕ ರೀತಿಯಲ್ಲಿಯೇ ಗಂಭೀರತೆ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ