ಕೋವಿಶೀಲ್ಡ್ ಲಸಿಕೆ ಪರಿಣಾಮಕಾರಿ ಅಲ್ಲ!

ಮಂಗಳವಾರ, 26 ಏಪ್ರಿಲ್ 2022 (08:44 IST)
ಪುಣೆ : ಕೋವಿಶೀಲ್ಡ್ ಲಸಿಕೆಯು ಒಮಿಕ್ರೋನ್ ಬಿ.ಎ.1 ಉಪತಳಿಯ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.

ಇತ್ತೀಚೆಗೆ ಕೋವಿಡ್ ವೈರಸ್ನ ರೂಪಾಂತರಿಯ ವಿರುದ್ಧ ಕೋವಿಶೀಲ್ಡ್ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಐಎಮ್ಆರ್ಸಿಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು.

ಈ ಅಧ್ಯಯನದಲ್ಲಿ ಕೋವಿಶೀಲ್ಡ್ನ ಎರಡೂ ಡೋಸನ್ನು ಪಡೆದ ಒಮ್ಮೆಯೂ ಸೋಂಕಿಗೆ ತುತ್ತಾಗದವರ ಸೀರಂ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಇವರಲ್ಲಿ ಕೋವಿಡ್ 2 ಲಸಿಕೆ ಪಡೆದ ನಂತರವೂ ಒಮಿಕ್ರೋನ್ ರೂಪಾಂತರಿಯ ಉಪತಳಿಗಳ ವಿರುದ್ಧ ಹೋರಾಡುವ ಪ್ರತಿಕಾಯಗಳು ಶೇ. 0.11 ರಷ್ಟುಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿವೆ.

ಅಧ್ಯಯನದಲ್ಲಿ ಬೀಟಾ, ಹಾಗೂ ಡೆಲ್ಟಾರೂಪಾಂತರಿಯ ವಿರುದ್ಧ ಹೋರಾಡುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಆದರೆ ಒಮಿಕ್ರೋನ್ ಉಪತಳಿಯ ವಿರುದ್ಧ ಕೋವಿಶೀಲ್ಡ್ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಕೋವಿಶೀಲ್ಡ್ 2 ಡೋಸು ಪಡೆದವರೂ ನಿಗದಿತ ಅವಧಿಯ ನಂತರ ಬೂಸ್ಟರ್ ಡೋಸು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ