‘ಹೇಗೆ ನಡೆದುಕೊಳ್ಳಬೇಕೆಂದು ನಾವು ಹೇಳಿಕೊಡಬೇಕಾ?’: ಸಚಿವೆ ನಿರ್ಮಲಾ ವಿರುದ್ಧ ಡಿಸಿಎಂ ಪರಂ ಗರಂ
‘ಅವರು ನಮ್ಮ ರಾಜ್ಯದಿಂದಲೇ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದವರು. ಅವರಿಗೆ ಹೇಗೆ ನಡೆದುಕೊಳ್ಳಬೇಕೆಂದು ನಾವು ಹೇಳಿಕೊಡಬೇಕಾ? ತಾವೊಬ್ಬರ ರಕ್ಷಣಾ ಮಂತ್ರಿ ಎಂಬ ದುರಹಂಕಾರದಿಂದ ನಡೆದುಕೊಂಡಿದ್ದಾರೆ. ಸ್ಥಳೀಯ ಎಲ್ಲಾ ಪಕ್ಷದ ಶಾಸಕರು, ಸಂಸದರ ಜತೆ ಮಾತನಾಡಬೇಕಿತ್ತು’ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.