ವಾಜಪೇಯಿಯವರ ಸಂತಾಪ ಸೂಚನಾ ಸಭೆಯಲ್ಲಿ ಗಹಗಹಿಸಿ ನಕ್ಕಿರುವ ಸಚಿವ ಮಹಾಶಯರು ಯಾರು ಗೊತ್ತಾ?
ಶುಕ್ರವಾರ, 24 ಆಗಸ್ಟ್ 2018 (15:24 IST)
ರಾಯಪುರ : ಚತ್ತೀಸ್ ಘಡ್ ದಲ್ಲಿ ಸಚಿವರಿಬ್ಬರು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂತಾಪ ಸೂಚನಾ ಸಭೆಯಲ್ಲಿ ಗಹಗಹಿಸಿ ನಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಗುರುವಾರ ಚತ್ತೀಸ್ಘಡಲ್ಲಿ ನಡೆದ ಅಟಲ್ ಜಿ ಅಸ್ಥಿ ವಿಸರ್ಜನೆ ಹಾಗೂ ಸಂತಾಪ ಸೂಚನಾ ಸಭೆಯಲ್ಲಿ ಕೃಷಿ ಸಚಿವ ಬ್ರಿಜ್ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ ಸಚಿವ ಅಜಯ್ ಚಂದ್ರಶೇಖರ್ ಅವರು ವೇದಿಕೆಯಲ್ಲಿ ಟೇಬಲ್ ತಟ್ಟಿ ಗಹಗಹಿಸಿ ನಕ್ಕಿದ್ದಾರೆ. ಇದನ್ನು ಕಂಡ ಬಿಜೆಪಿ ವರಿಷ್ಠ ಧರ್ಮಲಾಲ್ ಕೌಶಿಕ್ ವೇದಿಕೆಯಲ್ಲಿ ನಗದಂತೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ಇದೀಗ ಬಾರೀ ಚರ್ಚೆಗೆ ಕಾರಣವಾಗಿದೆ.
ಸಚಿವರ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ವಾಜಪೇಯಿ ಅವರು ಬದುಕಿದ್ದಾಗ ಬಿಜೆಪಿ ಅವರನ್ನು ಕಡೆಗಣಿಸಿತ್ತು. ಈಗ ಬಿಜೆಪಿ ಸಚಿವರ ಈ ವರ್ತನೆ ವಾಜಪೇಯಿ ಅವರ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಟಲ್ ಜೀ ಅವರ ಮೇಲೆ ಬಿಜೆಪಿ ಹಾಗೂ ಸಿಎಂ ರಮಣಸಿಂಗ್ ತೋರುತ್ತಿರುವ ಗೌರವ, ಪ್ರೀತಿ ಎಲ್ಲವೂ ನಾಟಕ ಎಂದು ಟೀಕಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ