ಕರ್ನಾಟಕಕ್ಕೆ ಕಂಟಕವಾಗುತ್ತಾ ಡಿಸೆಂಬರ್?

ಸೋಮವಾರ, 29 ನವೆಂಬರ್ 2021 (08:51 IST)
ಬೆಂಗಳೂರು : ಇಡೀ ಜಗತ್ತನ್ನೇ ಕಾಡಿದ, ಕಂಗೆಡಿಸಿದ, ಜನ ಜೀವನವನ್ನೇ ಬುಡಮೇಲಾಗಿಸಿದ ಕೊರೊನಾ ವೈರಸ್ ಅಟ್ಟಹಾಸದ ನೆನಪು ಇನ್ನೂ ಹಸಿ ಹಸಿಯಾಗಿಯೇ ಇದೆ.
ಕೊರೊನಾ ದಾಳಿಗೆ ಬಲಿಯಾದವರ ಮನೆ ಮಂದಿ ಇನ್ನೂ ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. ತಜ್ಞರು ಈ ಹಿಂದೆಯೇ ಡಿಸೆಂಬರ್ನಲ್ಲಿ ಕೊರೊನಾ 3ನೇ ಅಲೆ ಬರುತ್ತೆ ಎಂದು ಅಚ್ಚರಿಕೆಯ ಗಂಟೆ ಬಾರಿಸಿದ್ದರು. ಡಿಸೆಂಬರ್ ಕೊನೆ ಅಥವಾ ಜನವರಿ ಆರಂಭದಲ್ಲಿ ಮೂರನೇ ಅಲೆ  ಅಂತ ಎಚ್ಚರಿಕೆ ನೀಡಿದ್ದರು.
ಕಳೆದ ಕೆಲ ದಿನಗಳಲ್ಲಿ ನಡೀತಿರೋ ಬೆಳವಣಿಗೆಗಳನ್ನ ನೋಡಿದ್ರೆ ಅದ್ಯಾಕೊ ಕೊರೊನಾ ಮತ್ತೆ ಕಣ್ಣು ಬಿಡ್ತಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಕೊರೊನಾ ಕೇಸ್ಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗ್ತಿದೆ.
ಕಳೆದ ಒಂದು ವಾರದಿಂದ 250 -280 ಅಸುಪಾಸಿನಲ್ಲಿದ್ದ ಕೇಸ್ಗಳ ಸಂಖ್ಯೆ ನಿತ್ಯ 320-330 ಅಸುಪಾಸಿಗೆ ಏರಿಕೆ ಕಾಣುತ್ತಿವೆ. ಸಾವಿರಕ್ಕಿಂತ ಹೆಚ್ಚು ಕೇಸ್ಗಳು ಏರಿಕೆಯಾದ್ರೆ ಮೂರನೇ ಅಲೆ ಆರಂಭ ಎಂದು ತಜ್ಞರು ಖಚಿತವಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಲದ್ದಕ್ಕೆ ಈ ಒಮಿಕ್ರಾನ್ ಅನ್ನೋ ಕ್ರಿಮಿಯ ಹುಟ್ಟು ಬೇರೆ. ಹೀಗಾಗಿ ಡಿಸೆಂಬರ್ ತಿಂಗಳು ಕಂಟಕವಾಗುತ್ತಾ ಅನ್ನೋ ಅನುಮಾನ ಕಾಡ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ