ಡಿಸ್ಕೌಂಟ್ ದಂಡ : 100 ಕೋಟಿಗೂ ಅಧಿಕ ದಂಡ ಸಂಗ್ರಹ

ಭಾನುವಾರ, 12 ಫೆಬ್ರವರಿ 2023 (10:29 IST)
ಬೆಂಗಳೂರು : ರಾಜ್ಯದಲ್ಲಿ 50 ಪರ್ಸೆಂಟ್ ಡಿಸ್ಕೌಂಟ್ ದಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
 
ಶನಿವಾರ ಕೊನೆಯ ದಿನವಾಗಿದ್ದು, ದಂಡದ ಮೊತ್ತ 100 ಕೋಟಿ ಗಡಿ ದಾಟಿದೆ. ದಂಡ ಪಾವತಿಗೆ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

ಕೊನೆಯ ದಿನವಾದ ಶನಿವಾರ ದಂಡ ಪಾವತಿಗೆ ನೂಕು ನುಗ್ಗಲು ಹೆಚ್ಚಾಗಿತ್ತು. ಕೆಲ ಪೊಲೀಸ್ ಠಾಣೆ ಮುಂಭಾಗ ಜನರು ಸಾಲುಗಟ್ಟಿ ನಿಂತಿದ್ದರಿಂದ ಪೊಲೀಸರೂ ಹೈರಾಣಾಗಿದ್ದರು. 

26.26 ಲಕ್ಷ ಸಂಚಾರ ನಿಮಯ ಉಲ್ಲಂಘನೆ ಮಾಡಿರೋ ಕೇಸ್ಗಳು ವಿಲೇವಾರಿಯಾಗಿದೆ. ಒಟ್ಟಿನಲ್ಲಿ ಆಫ್ ರೇಟ್, ಚೀಪ್ ರೇಟ್ಗೆ ಬೆಂಗಳೂರಿಗರು ಕೆಲಸ ಕಾರ್ಯ ಬಿಟ್ಟು ಕೇಸ್ ಕ್ಲಿಯರ್ ಮಾಡಿಕೊಂಡಿದ್ದರೆ, ಮತ್ತಷ್ಟು ಮಂದಿ ಕೊನೆ ದಿನಾಂಕದವರೆಗೆ ಕಾದು ದಂಡ ಕಟ್ಟೋದಕ್ಕೆ ಆಗದೇ ಸುಮ್ಮನಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ