ಕಾಂಗ್ರೆಸ್ ನಾಯಕರ ವಿರುದ್ಧವೇ ಸಿಡಿದೆದ್ದ ಡಿಕೆಶಿ ಆಂಡ್ ಟೀಂ
ಡಿಕೆ ಶಿವಕುಮಾರ್ ಮತ್ತು ಸಹೋದರ ಡಿಕೆ ಸುರೇಶ್ ಬಿಜೆಪಿ ತೆಕ್ಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಜಾರದಂತೆ ಕಾಪಾಡಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದರು. ಈ ಪರಿಶ್ರಮಕ್ಕೆ ಅವರಿಗೆ ಹೈಕಮಾಂಡ್ ಸೂಕ್ತ ಬೆಲೆ ಕೊಡಬಹುದು ಎಂದೇ ಡಿಕೆಶಿ ಆಪ್ತರು ಲೆಕ್ಕಾಚಾರ ಹಾಕಿದ್ದರು.
ಆದರೆ ನಿರೀಕ್ಷಿಸಿದಂತೆ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗದ ಹಿನ್ನಲೆಯಲ್ಲಿ ಡಿಕೆಶಿ ಸಹೋದರರು ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಶಾಸಕರಿದ್ದ ರೆಸಾರ್ಟ್ ನಿಂದ ಹೊರ ನಡೆದ ಸಹೋದರರು ಇದೀಗ ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.