ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ!

ಮಂಗಳವಾರ, 5 ಜುಲೈ 2022 (13:13 IST)
ಇಟಾನಗರ : ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಸ್ಟ್ರಾಟೆಜಿಕ್ ಸೇತುವೆಯು ಪ್ರವಾಹದಿಂದಾಗಿ ಕೊಚ್ಚಿಹೋದ ಘಟನೆ ನಡೆದಿದೆ.

ಕೊರೊರು ಗ್ರಾಮದ ಬಳಿ ಓಯಾಂಗ್ ನದಿಯ ಮೇಲೆ ಇರುವ ಸೇತುವೆಯು ಜಿಲ್ಲಾ ಕೇಂದ್ರವಾದ ಕೊಲೊರಿಂಗ್ ಅನ್ನು ಡಾಮಿನ್ನೊಂದಿಗೆ ಸಂಪರ್ಕಿಸುತ್ತಿತ್ತು. ಇದು ಭಾರತ-ಚೀನಾ ಗಡಿಯಲ್ಲಿ ಪ್ರಮುಖ ಕೊಂಡಿಯಾಗಿದೆ.

ಬಿಆರ್ಓದ ಪ್ರಾಜೆಕ್ಟ್ ಅರುಣಾಂಕ್ ಮುಖ್ಯ ಇಂಜಿನಿಯರ್ ಬ್ರಿಗ್ ಅನಿರುದ್ಧ್ ಎಸ್. ಕನ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರವಾಹದಿಂದಾಗಿ ಕೊಲೊರಿಯಾಂಗ್-ಹುರಿ ರಸ್ತೆಯಲ್ಲಿನ ಸೇತುವೆಯು ಲೀಯಿಂದ ಸುಮಾರು ಒಂದು ಕಿ.ಮೀವರೆಗೆ ಕೊಚ್ಚಿಹೋಗಿದೆ.

ಇದರ ಪರಿಣಾಮ ಎಷ್ಟಿತ್ತೆಂದರೆ ಸೇತುವೆಯ ಫಲಕವು 100 ಮೀ. ಕೆಳಗೆ ಕಾಣುತ್ತದೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ